Showing posts with label ಸಣ್ಣವನ ಮತವಲ್ಲ ಸಾರಿ ಹೇಳಮ್ಮ purandara vittala. Show all posts
Showing posts with label ಸಣ್ಣವನ ಮತವಲ್ಲ ಸಾರಿ ಹೇಳಮ್ಮ purandara vittala. Show all posts

Friday, 6 December 2019

ಸಣ್ಣವನ ಮತವಲ್ಲ ಸಾರಿ ಹೇಳಮ್ಮ purandara vittala

ಪುರಂದರದಾಸರು
ಸಣ್ಣವನ ಮತವಲ್ಲ ಸಾರಿ ಹೇಳಮ್ಮ |ಕಣ್ಣ ಮುಚ್ಚಿ ಆಡುವಾಗಕಾಕುಮಾಡಲೇತಕಮ್ಮಪ

ಮೊಸರ ಕದ್ದರೆ ನಾವು ಮೊರೆಯಿಡ ಬಂದುದಿಲ್ಲ |ಪೊಸ ಕುಚಗಳ ಮುಟ್ಟಿ ಪೊಗಲೀಸನಮ್ಮ ||ಹಸು ಮಗನರಿಯದೆ ಆವಾಗಲೂ ಪಿಡಿವ |ಬಸುರುಹಬಿ ಮೊಗ್ಗೆಯೆಂದು ಪಿಡಿದಡೇನಾಯ್ತಮ್ಮ 1

ನವನೀತಬೇಡಿದರೆ ನಾವೇನೆಂಬುದಿಲ್ಲ |ಯುವತಿಯರಧರವ ಬೇಡಬೇಕೆ? ||ಅವನಾವಾಗಲೂ ಮೆಲ್ವ ಆಲದ ಪಣ್ಣೆಂದು |ಸವಿಗಂಡು ಬೇಡಿದರೆ ಸಾಧಿಸಲೇತಕಮ್ಮ 2

ಭೂಮಿಗೆ ಲಂಡನು ನಮ್ಮ ಪುರುಷರಿಲ್ಲದ ವೇಳೆ |ಕಾಮಿನೆ ಗಂಡನಂದದಿ ಕರೆಯುತೈದಾನೆ ||ಪ್ರೇಮದಿ ಪುರಂದರವಿಠಲನ ನೆನೆದರೆ |ಕಾಮಿನಿಯರಿಗೆ ಕಲ್ಪವೃಕ್ಷ ಕೈಸೇರುವಂತೆ 3
***

pallavi

saNNavana matavalla sAri hELamma 
kaNNu muccalADuvAga kAku mADala yAtakamma

caraNam 1

mosara kaddare nAvu moreyiDabandudilla hosa kucangaLa muTTi pOdanalle
hasu maganariyade avanu Agali meluva bisuruha moggeyendu piDidarEnAyite

caraNam 2

navanItavanu bEDe nAvendudillavamma yuvatiyanudaradi kaTTira bEDa
avanu Agali meluva Alada haNNendu savi kaNDu bEDidare adake sAdhisa bandu

caraNam 3

bhUmige laNDanu namma puruSarillada hinde kAmisi kaNDana hAge karavudaidAne
prEmadim purandara viTTalanna nenedare kAmita kalpa vrkSavu kai sEride
***