ಮಂಗಳಾರತಿ ಮಾಡಿರೇ ಶೃಂಗಾರದ ಸಿರಿಗೇ ಪ
ಮಂಗಳ ಮುಖಪದದಿಂದ ಪಾಡುತಲೆಪೊಂಗೊಳಲೂದುವನಂಗ ಜನಕಗೇ ಅ.ಪ.
ಹೆಂಗಳೆಯ ರಕ್ಷಿಸುವವಗೆ ಸುಮನಂಗಳಯುತನುಭಂಗಾರಾಭರಣಂಗಳಿಟ್ಟಿಹನು ಭೃಂಗಾವಳಿಯುತನುಕಂಗಾಳಿಂದಲೆ ನೋಡುತಲಿಹನು ಮನ ಮೋಹಿಸುತಿಹನುಮಂಗಳ ಮಹಿಮಹಹೆಂಗವದನ ನಿಜ ಸಂಗ ಕಾಮದಾ-ನಂಗ ಜನಕ ಬೆಳದಿಂಗಳೆಸನ ಕ್ರೂರಂಗ ವೈರಿ ಭ್ರೂ ಭೃಂಗ ಚದುರ ಭವಸಂಗಹೀನ ನರಸಿಂಗ ಕೂಪ ಜಂಗುಳೇಂದ್ರಯದೋಪಾಂಗ ವೇದ ಮದಗಂಗ ಜನಕ ವೃಜಭಂಗ ಮಾತುಳನ ಮುಂಗುರುಳ್ಹಿಡಿದೆಳೆದನು ಸಂಗರದೊಳಗೇ 1
ಮರುಗ ಮಲ್ಲಿಗೆ ಚಂಪರಗಳನು ಕುರುಬಕ ಕುಟಿಜವನುಸುರಗಿ ಸೇವಂತಿಗೆ ಕೇತಕೆಗಳನು ಸರಸಿಜ ಬಕುಳವನುಪರಿಮಳಾ ತುಳಸಿ ಮಾಲೆಗಳಾನು ಕೊರಳೊಳಗಿಟ್ಟಿಹನು ಕೊರಳೊಳಗಿಟ್ಟಿಹನುಸುರಗಿ ಪದಕ ಕಂದರಮಣಿಧರ ಸುವರ್ಣ ಕಾಂಚಿಕಟಿ ಕರದಿ ಕಂಕಣದಿಮುರಗಿ ತೋಡೆ ಮಣಿ ಜರದ ವಸನಾ ಬೆರಳಿಗುಂಗುರ ಕರ್ಣ ಕುಂಡಲಗುರುಳು ತಿಲಕ ಭೂಸ್ವರ್ಣಚಾಪ ಶುಭಸಿರಿ ವಕ್ಷಸುಂದರಮುಖ ನಾಸಿಕ ಧರ ಉಪವಳ ಗೋಕುಲಧರಗಿಳಿಗೇ 2
ಇಂದಿರೇಶನು ಬಂದಿಹನಿಲ್ಲೆ ಚಂದಿರ ಬಿಂಬದಲೇದ್ವಂದ್ವ ಸುಕೇಶ ಗಿರಿವರದಲ್ಲೇ ನಿಂದಿಹ ತೀರದಲೇವೃಂದಾರಾಕಾರ ಕೂಡಿಹನಿಲ್ಲೆ ಭೂವೈಕುಂಠದಲೆ ಭೂವೈಕುಂಠದಲೆಕಂಧರಧರ ಅರವಿಂದ ನಯನ ಮುದದಿಂದ ರಂಜಿಸುತಚಂದ್ರಮೌಳಿ ದಿವಿಜೇಂದ್ರ ವಿನುತ ನಾರದ ಮುನಿನುತಗಂಧರ್ವರಪ್ಸರದಿಂದ ನರ್ತನಾದಿಂದ ಸಂಸ್ಕøತಮಂದ ಸುಗುಣಸಿಂಧು ಪಾಂಡವರ ಗೋ-ವಿಂದ ಸಚ್ಚಿದಾನಂದಮೂರ್ತಿ ಮುಚುಕುಂದ ವರದಗೇ 3
****