Showing posts with label ಶ್ರೀವೇಂಕಟೇಶ ಪಾಲಿಸೋ ನಿನ್ನ ಶ್ರೀಪಾದ gurugopala vittala. Show all posts
Showing posts with label ಶ್ರೀವೇಂಕಟೇಶ ಪಾಲಿಸೋ ನಿನ್ನ ಶ್ರೀಪಾದ gurugopala vittala. Show all posts

Tuesday, 13 April 2021

ಶ್ರೀವೇಂಕಟೇಶ ಪಾಲಿಸೋ ನಿನ್ನ ಶ್ರೀಪಾದ ankita gurugopala vittala

ಶ್ರೀ ವೇಂಕಟೇಶ ಪಾಲಿಸೋ ನಿನ್ನ ಶ್ರೀಪಾದ 

ಸೇವಕರೊಡನಾಡಿಸೋ ll ಪ ll


ಕೇವಲ ಭವದೊಳು ಧಾವತಿಗೊಂಡು ನಾ

ಕಾವರ ಕಾಣದೆ ದೇವನೆ ಮೊರೆಹೊಕ್ಕೆ  ll ಅ ಪ ll


ಉದಿತ ಭಾಸ್ಕರ ಪ್ರಕಾಶ ಶ್ರೀವೇಂಕಟೇಶ

ಪದುಮಾವತಿಯ ಪ್ರಾಣೇಶ

ಪದುಮಸಂಭವ ಭವ ತ್ರಿದಶಾಧಿಪನುತ

ಪದಪಂಕಜವೆನ್ನ ಹೃದಯದಿ ತೋರೋ ಶ್ರೀ-

ಸದನ ಹಯವದನ ಜಿತಕದನ ಕೃತಖಳಕುಲನಿಧನ ll 1 ll


ದಕ್ಷಿಣಾಕ್ಷಿ ವಾಸ ಈಶ ಜಾಗರಾವಸ್ಥಾ-

ಧ್ಯಕ್ಷನೆ ಕಾಯೋ ಹೃಷೀಕೇಶ

ಈಕ್ಷಿಸು ಕರುಣಾ ಕಟಾಕ್ಷದಿ ಎನ್ನಯ

ಸಾಕ್ಷಿಗೆ ನಿನ್ನಪರೋಕ್ಷ ಪಾಲಿಸು ಶ್ರೀ-

ವಕ್ಷ ಕಮಲಾಕ್ಷ ಸುರಪಕ್ಷ ಭವಕರಿಹರ್ಯಕ್ಷ ll 2 ll


ಉಣಲಾರೆ ಉಣಲಾರೆನೊ ಈ ಕರ್ಮಫಲಕೆ

ಕೊನೆಗಾಣೆ ಕೊನೆಗಾಣೆನೋ

ಆನನುತ ಗುರುಗೋಪಾಲವಿಟ್ಠಲ ನಿನ್ನ

ನೆನೆವ ಜೀವನಕೆ ಜೀವನಮಾಡಿ ಪಾಲಿಸೊ ಶ್ರೀಹರಿಯೆ

ಎನ್ನ ದೊರೆಯೆ ಹೀಗೆ ಪೊರೆಯೆ ಉಪಕಾರ ನಾ ಮರೆಯೆ ll 3 ll

***