Tuesday, 13 April 2021

ಶ್ರೀವೇಂಕಟೇಶ ಪಾಲಿಸೋ ನಿನ್ನ ಶ್ರೀಪಾದ ankita gurugopala vittala

ಶ್ರೀ ವೇಂಕಟೇಶ ಪಾಲಿಸೋ ನಿನ್ನ ಶ್ರೀಪಾದ 

ಸೇವಕರೊಡನಾಡಿಸೋ ll ಪ ll


ಕೇವಲ ಭವದೊಳು ಧಾವತಿಗೊಂಡು ನಾ

ಕಾವರ ಕಾಣದೆ ದೇವನೆ ಮೊರೆಹೊಕ್ಕೆ  ll ಅ ಪ ll


ಉದಿತ ಭಾಸ್ಕರ ಪ್ರಕಾಶ ಶ್ರೀವೇಂಕಟೇಶ

ಪದುಮಾವತಿಯ ಪ್ರಾಣೇಶ

ಪದುಮಸಂಭವ ಭವ ತ್ರಿದಶಾಧಿಪನುತ

ಪದಪಂಕಜವೆನ್ನ ಹೃದಯದಿ ತೋರೋ ಶ್ರೀ-

ಸದನ ಹಯವದನ ಜಿತಕದನ ಕೃತಖಳಕುಲನಿಧನ ll 1 ll


ದಕ್ಷಿಣಾಕ್ಷಿ ವಾಸ ಈಶ ಜಾಗರಾವಸ್ಥಾ-

ಧ್ಯಕ್ಷನೆ ಕಾಯೋ ಹೃಷೀಕೇಶ

ಈಕ್ಷಿಸು ಕರುಣಾ ಕಟಾಕ್ಷದಿ ಎನ್ನಯ

ಸಾಕ್ಷಿಗೆ ನಿನ್ನಪರೋಕ್ಷ ಪಾಲಿಸು ಶ್ರೀ-

ವಕ್ಷ ಕಮಲಾಕ್ಷ ಸುರಪಕ್ಷ ಭವಕರಿಹರ್ಯಕ್ಷ ll 2 ll


ಉಣಲಾರೆ ಉಣಲಾರೆನೊ ಈ ಕರ್ಮಫಲಕೆ

ಕೊನೆಗಾಣೆ ಕೊನೆಗಾಣೆನೋ

ಆನನುತ ಗುರುಗೋಪಾಲವಿಟ್ಠಲ ನಿನ್ನ

ನೆನೆವ ಜೀವನಕೆ ಜೀವನಮಾಡಿ ಪಾಲಿಸೊ ಶ್ರೀಹರಿಯೆ

ಎನ್ನ ದೊರೆಯೆ ಹೀಗೆ ಪೊರೆಯೆ ಉಪಕಾರ ನಾ ಮರೆಯೆ ll 3 ll

***


No comments:

Post a Comment