Tuesday, 13 April 2021

ಬೃಂದಾವನಗಳಿಗಾನಮಿಪೆ ನಿತ್ಯ ankita jagannatha vittala

 ಬೃಂದಾವನಗಳಿಗಾನಮಿಪೆ ನಿತ್ಯ ll ಪ ll

ನಂದತೀರ್ಥರ ಮತೋದ್ಧಾರಕರೆನಿಪ ನವ ll ಅ ಪ ll


ವರಮಧ್ವಮುನಿ ವಿಮಲಕರ ಪದ್ಮ ಸಂಜಾತ

ಗುರುಪದ್ಮನಾಭರಾಮರ ಕವೀಂದ್ರ ತತ್

ಕರಸರೋರುಜಾತ ವಾಗೀಶಮುನಿಪ ರಘು-

ವರ್ಯ ಗೋವಿಂದಾಖ್ಯರೊಡೆಯರ ಪವಿತ್ರತಮ ll 1 ll


ಶ್ರೀಸುರೇಂದ್ರಾರ್ಯರ ಸುಪುತ್ರರೆನಿಪ ಸುಧೀಂದ್ರ

ವ್ಯಾಸರಾಯರ ಶ್ರೀವ್ಯಾಸಮುನಿಯ

ಭೂಸುರರು ಪರಮಸಂತೋಷದಲಿ ಸ್ಮರಿಸೆ ನಿ-

ರ್ದೋಷರನೆ ಮಾಡಿ ಅಭಿಲಾಷೆ ಪೂರೈಸುತಿಹ ll 2 ll


ದೇವತೆಗಳಿವರು ಸಂದೇಹಪಡಸಲ್ಲ ಮಿ-

ಥ್ಯಾವಾದಿಗಳ ಪರಾಭವರ ಮಾಡಿ

ಈ ವಸುಂಧರೆಯೊಳಗೆ ಕೀರ್ತಿಯುತರಾಗಿ ಲ-

ಕ್ಷ್ಮೀವರ ಜಗನ್ನಾಥವಿಟ್ಠಲನೈದಿಹರ ll 3 ll - ಶ್ರೀಜಗನ್ನಾಥದಾಸರು.

***


No comments:

Post a Comment