Showing posts with label ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ gadugina veeranarayana. Show all posts
Showing posts with label ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ gadugina veeranarayana. Show all posts

Wednesday 1 September 2021

ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ ankita gadugina veeranarayana

..

kruti by ವೀರನಾರಾಯಣ Veeranarayana 


ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ ಪ


ಪಾಪಿಯಂತೆದೆನ್ನ ಕೈಯನು ಬಿಡಬೇಡಗೋಪಾಲನೆ ಎಲ್ಲಕ್ಕೂ ಕರ್ತೃ ನೀನಲ್ಲವೆ ಅ.ಪ.


ಸಂಸಾರ ತಾಪವನಳಿಯೆ ಬಗೆಬಗೆಯುನಪುಂಸಕನಾಲೋಚನೆ ಮಾಡುವೆನೊಕಂಸಾರಿಯೆ ನೀನೆ ಭಾರ ಹೊತ್ತವನೆಂಬಅಂಶವನರಿಯದೆ ವ್ಯರ್ಥ ಬಳಲಿದೆನೊ 1


ಅಪಶಕುನಗಳು ಆ ವಿಘ್ನಗಳೆಲ್ಲವೂವಿಪರೀತ ಕಾಲವು ಉಪದ್ರವಂಗಳುಕೃಪೆಯಿಂದ ಪರಿಣಾಮಗೊಳ್ಳವೆಂದೆಂದಿಗೂಕೃಪೆಯ ಮಾಡಯ್ಯ ನೀ ಭಕ್ತವತ್ಸಲನೆ 2


ಯೋಚಿಸುವವ ನಾನು ಯೋಜಿಸುವ ನೀನುತೋಚದು ಗತಿಯೆಂದು ಚಿಂತಿಸುತಿರಲುಸೂಚನೆಗೊಡದೆ ಪರಿಹರಿಸಿ ಪೊರೆಯುವಿನಿಗಮಗೋಚರ ನಿನ್ನ ಕಾರುಣ್ಯವನರಿಯನೋ 3


ಅಂಬುಜಾಕ್ಷನೆ ನಿನ್ನ ನಂಬಿದ ಜನರನುಬೆಂಬಿಡದೆ ಕಾಯುವ ನೀ ಕೃಪಾಳೋತುಂಬ ಒಲುಮೆಯನೀಯೊ ನಿತ್ಯದಿ ಭಕ್ತಕು ಟುಂಬಿಯೆ ಗದುಗಿನ ವೀರನಾರಾಯಣ 4

***