Showing posts with label ಯತಿಗಳ ಸತತ ಸಂಸ್ತುತಿಸುವೆ ಅತಿತ್ವರಿತದಲಿ ದುರಿತಗಳ ತರಿವೆ varadesha vittalaru. Show all posts
Showing posts with label ಯತಿಗಳ ಸತತ ಸಂಸ್ತುತಿಸುವೆ ಅತಿತ್ವರಿತದಲಿ ದುರಿತಗಳ ತರಿವೆ varadesha vittalaru. Show all posts

Thursday, 5 August 2021

ಯತಿಗಳ ಸತತ ಸಂಸ್ತುತಿಸುವೆ ಅತಿತ್ವರಿತದಲಿ ದುರಿತಗಳ ತರಿವೆ ankita varadesha vittalaru

 ..

kruti by ವರದೇಶ ವಿಠಲರು varadesha vittalaru 

ಯತಿವೃಂದ ಸ್ತೋತ್ರ


ಯತಿಗಳ ಸತತ ಸಂಸ್ತುತಿಸುವೆ

ಅತಿತ್ವರಿತದಲಿ ದುರಿತಗಳ ತರಿವೆ ಪ


ಮೋದತೀರ್ಥಾದಿ ಸುಬೋಧೇಂದ್ರ ಪರಿಯಂತ

ಮೋದದಿಂದವರ ಶ್ರೀಪಾದಕ್ಕೆ ನಮಿಪೆ 1


ಅಜನಪಿತನಪಾದ ಭಜಿಸುವ ಭಕುತ

ನಿಜವಾಗಿ ಪಾಲಿಪ ಸುಜನೇಂದ್ರ ತೀರ್ಥ 2


ಆನತಜನ ಪಾಪಕಾನನದಹಿಪ ಕೃ

ಶಾನನಂತಿಪ್ಪ ಸುಙÁ್ಞನೇಂದ್ರ ತೀರ್ಥ 3


ದುರ್ಮತಧ್ವಂಸ ಸದ್ಧರ್ಮ ಸಂಸ್ಥಾಪಕ

ಕರ್ಮಂದಿವರ ಸುಧರ್ಮೇಂದ್ರ ತೀರ್ಥ 4


ಅಗಣಿತಮಹಿಮ ಮೂಜಗದೊಳು ಪ್ರಖ್ಯಾತ

ನಿಗಮಾಗಮಜ್ಞ ಶ್ರೀ ಸುಗುಣೇಂದ್ರ ತೀರ್ಥ 5


ಸಸುಪ್ರಸಿದ್ಧ ಮುನಿ ವಿಪ್ರಸಮೂಹವ

ಕ್ಷಿಪ್ರದಿಪಾಲಿಪ ಸುಪ್ರಙÉ್ಞಂದ್ರಾಖ್ಯ 6


ದೋಷವರ್ಜಿತಹರಿದಾಸ ಜನರಪ್ರಿಯ

ಶ್ರೀಶ ಪದಾರ್ಚಕ ಸುಕೃತೀಂದ್ರ 7


ಮೂಲೋಕ ವಿಖ್ಯಾತ ಶ್ರೀಲೋಲನಂಘ್ರಿ ಕೀ -

ಲಾಲಜಮಧುಪ ಸುಶಿಲೇಂದ್ರ ಮುನಿಪ 8


ವರದೇಶ ವಿಠಲನ ಪರಿಪರಿ ಪೂಜಿಪ

ಪರಮಹಂಸರ ಪಾದಕ್ಕೆರಗಿ ಬಿನ್ನೈಪೆ 9

****