ಶ್ರೀ ಗುರು ಗೋವಿಂದ ವಿಠಲ ದಾಸರ ಕೃತಿ
ಉಮಾರಮಣ ಶಂಭೋ -
ಪಾಲಯ ಉಮಾರಮಣ ಶಂಭೋ |ಪ|
ರಮಾರಮಣ ಪದ |
ಕಮಲ ಮಧುಪನೆ |
ಯಮ ನಿಯಮ ಶಮ
ದಮಾದಿ ಗುಣ ಕೊಡು |ಅ.ಪ|
ಕಮಲ ಭವ ಭವ ಶಂಕರಾ |
ವಿಮಲರೂಪಳು ಗಂಗಾಧರ|
ಅಮರ ಸನ್ನುತ ಹರ ಹರಾ |
ನಮೊ ನಿನ್ನ ಪದ ಪುಷ್ಕರಾ |1|
ದೂರ್ವಾಸ ಮಹ ಮುನಿ ರುದ್ರನೆ|
ಪೂರ್ವ ದಿವಿಜ ಪ್ರಿಯ ಉಗ್ರನೇ
ಮೌರ್ವಿ ಪಿನಾಕಿಧರ ಶೂರನೇ |
ಶರ್ವಾನೆ ತುತಿಸಲಾಪನೇ | 2 |
ಗುರು ಗೋವಿಂದ ವಿಠಲಾ |
ಪೊರೆವನೆಂಬಂಥ ನಿಶ್ಚಲಾ ವರಮತಿಯನೀಯೊ ತ್ರೈಶೂಲ |
ಧರ ಹರಿಸೊ ಮಾಯ ಪಟಲಾ |3|
***