Wednesday, 17 February 2021

ಉಮಾರಮಣ ಶಂಭೋ ಪಾಲಯ ಉಮಾರಮಣ ಶಂಭೋ ankita gurugovinda vittala

 ಶ್ರೀ ಗುರು ಗೋವಿಂದ ವಿಠಲ ದಾಸರ ಕೃತಿ


ಉಮಾರಮಣ ಶಂಭೋ - 

ಪಾಲಯ ಉಮಾರಮಣ ಶಂಭೋ  |ಪ|


ರಮಾರಮಣ  ಪದ | 

ಕಮಲ ಮಧುಪನೆ | 

ಯಮ ನಿಯಮ ಶಮ 

ದಮಾದಿ ಗುಣ ಕೊಡು |ಅ.ಪ|


ಕಮಲ ಭವ ಭವ  ಶಂಕರಾ |

ವಿಮಲರೂಪಳು ಗಂಗಾಧರ| 

ಅಮರ ಸನ್ನುತ ಹರ ಹರಾ | 

ನಮೊ ನಿನ್ನ ಪದ ಪುಷ್ಕರಾ  |1|


ದೂರ್ವಾಸ ಮಹ ಮುನಿ ರುದ್ರನೆ| 

ಪೂರ್ವ ದಿವಿಜ ಪ್ರಿಯ ಉಗ್ರನೇ

ಮೌರ್ವಿ ಪಿನಾಕಿಧರ ಶೂರನೇ | 

ಶರ್ವಾನೆ ತುತಿಸಲಾಪನೇ  | 2 |


ಗುರು ಗೋವಿಂದ ವಿಠಲಾ | 

ಪೊರೆವನೆಂಬಂಥ  ನಿಶ್ಚಲಾ ವರಮತಿಯನೀಯೊ ತ್ರೈಶೂಲ | 

ಧರ ಹರಿಸೊ ಮಾಯ ಪಟಲಾ  |3|

***

No comments:

Post a Comment