Wednesday, 17 February 2021

ಬಾರೊ ನಮ್ಮ ಮನಿಗೆ ಶ್ರೀ ಸೀತಾರಾಮಣ ankita sundaravittala

ಶ್ರೀಮೋದವಿಟ್ಠಲರ ಶಿಷ್ಯರಾದ ಗೌಡೂರು ರಾಘಪ್ಪನವರ ಕೃತಿ - ಅಂಕಿತ - ಸುಂದರವಿಟ್ಠಲ 

ರಾಗ -  :  ತಾಳ -


ಬಾರೊ ನಮ್ಮ ಮನಿಗೆ ಶ್ರೀ ಸೀತಾರಾಮಣ ll ಪ ll


ನಿನ್ನ ಆಜ್ಞಾಕ ನಾನು ಅನ್ಯಥಾವಿಲ್ಲವೊ l

ಯನ್ನಾಪರಾಧವ ಮನ್ನೀಸಿ ನೀ ಬ್ಯಾಗ ll ಅ ಪ ll 


ಜನಕನಾಜ್ಞಾವು ತಾಳಿ ವನವ ಪ್ರವೇಶಿಸಿ l

ದನುಜಾ ರಕ್ಕಸರ ಕೊಂದು ಮುನಿಗಾಳ ಪೊರೆದ ಸ್ವಾಮಿ ll ೧ ll


ಬಾಣಾವಟಿಯಲ್ಲಿ ಜಾಣ ನೀ ಪೋಗಿರಲು

ಏಣಾಗೋಸುಗ ಮಾನುನಿಯ ಕಳೆದ ಸ್ವಾಮಿ ll ೨ ll


ಕಾಂತಿಗೋಸುಗ ಮಾಲ್ಯವಂತಕ ಪೋಗಿ ನಿಜ l

ಮಾತ್ರಿಯ ನೋಡುದಾತಿ ಶಾಂತನಾದ ಸ್ವಾಮಿ ll ೩ ll


ಲೋಥೇಶನ ನಿಜ ಭ್ರಾತನ ಕೊಂದು ಕಪಿ l

ನಾಥರ ಕೂಡಿ ಅಬ್ಧಿಗೆ ಸೇತುವೆ ಕಟ್ಟಿದ ಸ್ವಾಮಿ ll ೪ ll


ತಡವು ಮಾಡದೆ ಅತಿಗಡನೆ ಶೇತುವಿ ದಾಟಿ l

ಜಡಜಾ ರಕ್ಕಸರನ್ನು ಹಿಡದು ಮಡುಹಿದ ಸ್ವಾಮಿ ll ೫ ll


(ಕೃತಿ ಅಪೂರ್ಣ.  ಮುಂದಿನ ನುಡಿಗಳು ಸಿಕ್ಕಿಲ್ಲ)

***


No comments:

Post a Comment