check almost similar under rangavittala ankita
ದುರಿತ ಗಜಕೆ ಪಂಚಾನನ, ನರ-
ಹರಿಯೆ ದೇವರ ದೇವ ಗಿರಿಯ ಗೋವಿಂದ ||ಪ||
ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||
ಅರಸು ಮುಟ್ಟಲು ದಾಸಿ ರಂಭೆಯು ದೇವ
ಪರಶು ಮುಟ್ಟಲು ಲೋಹ ಹೊನ್ನು ಗೋವಿಂದ ||
ಹೆಸರುಳ್ಳ ನದಿಗಳನೊಳಗೊಂಬ ಜಲಧಿಯು
ಬಿಸುಡುವನೆ ಕಾಲುಹೊಳೆಗಳನು ಗೋವಿಂದ ||
ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನು ಮೊರೆಹೋಗಲೇಕೆ ಗೋವಿಂದ ||
ಸ್ಮರಣೆಮಾತ್ರಕಜಾಮಿಳಗೆ ಮುಕ್ತಿಯನಿತ್ತೆ
ವರದ ಪುರಂದರವಿಠಲ ಗೋವಿಂದ ||
***
ರಾಗ ಮಧ್ಯಮಾವತಿ. ಅಟ ತಾಳ
pallavi
durita gajake pancAnana narahariye dEvara dEva giriya gOvinda
caraNam 1
hetta makkaLu maruLAdare tAi tande ettade nelake bisuDuvare gOvinda
caraNam 2
arasu muTTalu dAsi rambheyu dEva parashu muTTalu lOha honnu gOvinda
caraNam 3
hesaruLLa nadigaLanoLagomba jaladhiyu bisuDuvane kAluhoLegaLanu gOvinda
caraNam 4
munna mADida karma bennaTTi bandare ninnanu marehOgalEke gOvinda
caraNam 5
smaraNe mAtrakajAmiLage muktiyanitte varada purandara viTTala gOvinda
***