Showing posts with label ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ hayavadana. Show all posts
Showing posts with label ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ hayavadana. Show all posts

Wednesday, 1 September 2021

ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ ankita hayavadana

 ..

ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ ಪ.


ನೀರಜಭವಜನಕ ತಾರಿದೆ ಭವದಿಂದ ಏ ಮುರಹರೆಸೇರಿದೆ ನಿನ್ನ ಪದವ ಶ್ರೀರಮಣನೆ ಕಾಯೊ ಅ.ಪ.


ಕರುಳ ಸಂಬಂಧವೆಂಬೊ ಎನ್ನ ಕೊರಳಿಗೆಉರುಳುಗಳನೆ ಸಿಲುಕಿ [ಸಿ]ಬರಿದೆ ಮದಗಳೆಂಬ ಈಕರಿಗಳ ಧುರತಗ್ಗದು ಹರಿಯೆ 1


ಅರಿಷಡ್ವರ್ಗವೆಂಬ ಈ ಮಹಾಉರಗಭಯಕೆ ಸಿಲುಕಿಬರಿದೆ ಮದಗಳೆಂಬ ಈ ಕರಿಗಳ ಧುರತಗ್ಗದು ಹರಿಯೆ 2


ಬಲುದುರ್ವಿಷಯಂಗಳ ಈ ಬಲೆಗಳಸಾಲಿಗೆ ಒಳಗಾದೆಕಲಾವತಿ ಜನರೆಂಬ ಈಖಳರ ಒಳಬಿದ್ದೆನೊ ಹರಿಯೆ3


ಜರೆನರೆಗಳು ಬಂದು ಇರುವಾಗಪರಸತಿಯರ ಕಾಟನರನಾಯಿಗಳಂತೆ ಈ-ಪರಿ ನೆರೆಹೊರೆಗಳ ಕೂಟ 4


ದಯವಿಲ್ಲದ ಸತಿಯು ಈ ದುರುಳರುನಯಹೀನರು ಸುತರುಭಯದಿಂದಲಿ ನೊಂದೆದಯಾಂಬುಧೇ ಹಯವದನ ನೀ ಬಂಧು 5

***