time at 0.33
ವಿಠಲೇಶ ದಾಸರ ಕೃತಿ ankita vittalesha
ಎಂದು ಕಾಂಬೆ ಗುರುವೆ ದೊರೆಯೆ ಪ
ಎಂದು ಕಾಂಬೆ ನಿನ್ನ ಚಂದಿರಮುಖಸಿರಿ
ತಂದೆ ಶ್ರೀ ರಾಘವೇಂದ್ರ ಇಂದು ದಯವ ತೋರೊ ಅ.ಪ
ಘೋರಸಂಸಾರದಲ್ಲಿ ಜಾರಿಹೋಯಿತು ಕಾಲ
ಸಾರಿ ಕೇಳುವೆ ಸುಕುಮಾರ ಪ್ರಹ್ಲಾದ ನಿನ್ನ ಎಂದು 1
ನಾನಾರೋಗಗಳಲ್ಲಿ ಕ್ಷೀಣವಾಯಿತು ದೇಹ
ಏನು ಸ್ಥಿರವೋ ತನು ಮೌನಿವ್ಯಾಸನೆ ನಿನ್ನ ಎಂದು 2
ಕ್ಲೇಶಕಷ್ಟಗಳಲ್ಲಿ ಮಾಸಿಹೋಯಿತು ಬುದ್ಧಿ
ದೈಶಿಕವರ ವಿಠಲೇಶದಾಸನೆ ನಿನ್ನ ಎಂದು 3
***
ರಾಗ: ದುರ್ಗ ತಾಳ: ಆದಿ (raga, taala may differ in audio)