Showing posts with label ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು rukmineesha vittala. Show all posts
Showing posts with label ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು rukmineesha vittala. Show all posts

Monday, 2 August 2021

ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು ankita rukmineesha vittala

 .

ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು

ಕಂತುಪಿತ ಶ್ರೀಕೃಷ್ಣ ಮೂರುತಿಯಾ ಪ.


ಅಂತರಂಗದಲಿ ನಿಂತು ಪೊರೆಯುವ

ಏಕಾಂತ ಮೂರುತಿಯ ಕರುಣಾನಿಧಿಯಾ ಅ.ಪ.


ಆಲದೆಲೆಯ ಮೇಲೆ ಮಲಗಿದ ಸಿಂಧು

ನಲಿಯುತ ಕನಕನ ಕಿಂಡಿಯಲಿ ನಿಂದು

ಒಲಿದು ವರಗಳನೀವ ಗುಣಸಿಂಧು 1


ಕಂಠದಲಿ ಮುತ್ತಿನಹಾರ ವಜ್ರದಂಗಿಯ ಅಲಂಕಾರ

ಕಂಟೀಪದಕ ವಿಸ್ತಾರ ಕರದಲಿ ವಜ್ರದುಂಗೂರ

ಸೊಂಟಪಟ್ಟಿಯ ಕಟ್ಟಿದಾ ಚಂದ ನಾಭೀ ಕಮಲದಾನಂದ 2


ಕಡೆಕಣ್ಣು ಕಂಗಳಾ ನೋಟ ಕಸ್ತೂರಿ ಲಲಾಟ

ಕುಡಿಹುಬ್ಬುಗಳ ನೀಟಾ ವಜ್ರಮಾಣಿಕ್ಯದ ಕಿರೀಟ

ಪಿಡಿದಿರುವ ಕಡಗೋಲು ಕರದಿ ರುಕ್ಮಿಣೀಶ ವಿಠಲ 3

***