Showing posts with label ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ shree krishna. Show all posts
Showing posts with label ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ shree krishna. Show all posts

Wednesday, 1 September 2021

ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ankita shree krishna


ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ಪ


ಬಲಿಗಾಯತವಾದ ಕುರಿ ಮೆಲುವಂತೆ ಹೆಡ-ತಲೆ ಮೃತ್ಯುವನರಿಯದೆ ಮತ್ತನಾದೆ 1


ಕಂಡು ಕಂಡು ಪತಂಗ ಕಿಚ್ಚಿನೊಳ್ ಬೀಳ್ವಂತೆಕಂಡ ಕಂಡ ಹೇಯ ವಿಷಯಗಳಿಗೆರಗುವೆ 2


ಪತಿಯಿರಲು ಸತಿ ಅನ್ಯರರಸುವಂತೆಗತಿ ನೀನಿರಲು ಅನ್ಯರೆ ಗತಿಯೆಂಬೆ 3


ಒಂದು ಮೊಲಕೆ ಆರು ಹುಲಿ ಬಂದಡರುವಂತೆಬಂದೆಳೆವುತಲಿವೆ ಅರಿಷಡ್ವರ್ಗಗಳು 4


ಜೋಗಿಗಾಗಿ ಕೋಡಗ ಪಾಟು ಬಡುವಂತೆಲೋಗರಿಗಾಗಿ ನಾ ತೊಳಲಿ ಬಳಲುವೆ 5


ಶುಕನ ಓದುಗಳಂತೆ ಎನ್ನ ಓದುಗಳಯ್ಯಅಕಟಕಟವೆನಗೆ ಬಂಧಕವಾದುವೊ6


ಮಿಂದು ಮಿಂದು ಆನೆ ಹುಡಿ ಹೊಯ್ದು ಕೊಂಬಂತೆಮಂದಮತಿಯಾದೆ ಕರುಣಿಸೊ ಕೃಷ್ಣ 7

***