ಕಾಖಂಡಕಿ ಶ್ರೀ ಕೃಷ್ಣದಾಸರು
ಎಷ್ಟೆಂದು ಸಾರುವೆ ನಿಮ್ಮ ನಾಮ ಮಹಿಮಾ| ಶ್ರೀ ಪರಬೊಮ್ಮಾ ಶಿಷ್ಟ ಜನರ ಸಂಭ್ರಮಾ ಪ
ಹರಿಹರಿಯಂದೊದರೆ ಮರೆದರಿದೊಮ್ಮಾ| ಹರದ್ಹರ ದೋಹುದುಪಾಪ ಪುಣ್ಯವು ಮೋಪಾ| ತಿರು ತಿರುಗಿ ಯಾತ್ರೆಗಳಾ ಮಾಡಿದ ಫಲಾ| ಪರತರಾಸುಖ ನೀವುದು ರಕ್ಷಿಸುವುದು 1
ರಮ ರಾಮಯಂದು ಕಾಮಿಕಾಮಿ ಅಂದು| ನಾಮಾ ನೇಮದಿ ನುಡಿಯೆ ಗಿಳಿಯ ಕರಿಯೆ| ಪ್ರೇಮ ಪ್ರೇಮಕರ ತಂದೆ ಗತಿ ನೀಡದೇ| ಸೋಮ ಸೋಮಾರಿ ಕುಲೇಶ ಕೋಟಿ ಪ್ರಕಾಶಾ 2
ಪರಿ ಪರೀವದಾನಂದಾ| ಕರೆ ಕರೆದುಂಡು ನಲಿದರು ನಾರದಾದ್ಯರು| ತರಿಸಿ ತಾರಿಸುತಿಹರು ಸಾಧು ಸಂತರು| ಗುರುವರ ಮಹಿಪತಿ ಜನು ಧನ್ಯನಾದನು 3
***