ಕರುಣಿಸೋ ಕೃಷ್ಣ ಕರುಣಿಸೊ |
ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಪ
ಭೂತಳದೊಳು ನಾನು ಈ ತನುವುತೆತ್ತು |
ಪಾತಕದಲಿ ಯಮಯಾತನೆ ಪಟ್ಟೆ 1
ಇಂದೆನ್ನ ಹೃದಯವೆಂಬೊ ಮಂದಿರದೊಳು |
ಇಂದಿರೆ ರಮಣ 2
ಹಿಂದಿನ ಅವಗುಣ ಒಂದೂ ಎಣಿಸದೆ |
ಮುಂದೆ ದೋಷಕ್ಕೆ ಮನವೆರಗಿಸದೆ 3
ಪಾಪ ಪುರುಷನೆಂಬೊ ಪಾಪಿಯ ಕೈಗೆ |
ಪೋಪಗೊಡದೆ ಎನ್ನ ಕಾಪಾಡೊ ರನ್ನ 4
ಅಂತ್ಯಕಾಲದಲಿ ಅಂತಕರು ಬಂದು |
ನಿಂತಾಗಲಿ ನಿನ್ನ ಚಿಂತೆ ಒದಗಲಿ 5
ಕನಸಿನೊಳಗೆ ನಿನ್ನ ನೆನಸಿಕೊಂಬಂತೆ |
ಮನಸು ಸುಸ್ಥಿರವಾಗಲಿ ಅನುಗಾಲವಿರಲಿ 6
ಇದ್ದಾಗ ದಾಸರದಾಸನೆನಿಸೊ ಬೇಗ |
ಸಿರಿ ವಿಜಯವಿಠ್ಠಲ ಕರುಣಿಸೊ 7
***
ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಪ
ಭೂತಳದೊಳು ನಾನು ಈ ತನುವುತೆತ್ತು |
ಪಾತಕದಲಿ ಯಮಯಾತನೆ ಪಟ್ಟೆ 1
ಇಂದೆನ್ನ ಹೃದಯವೆಂಬೊ ಮಂದಿರದೊಳು |
ಇಂದಿರೆ ರಮಣ 2
ಹಿಂದಿನ ಅವಗುಣ ಒಂದೂ ಎಣಿಸದೆ |
ಮುಂದೆ ದೋಷಕ್ಕೆ ಮನವೆರಗಿಸದೆ 3
ಪಾಪ ಪುರುಷನೆಂಬೊ ಪಾಪಿಯ ಕೈಗೆ |
ಪೋಪಗೊಡದೆ ಎನ್ನ ಕಾಪಾಡೊ ರನ್ನ 4
ಅಂತ್ಯಕಾಲದಲಿ ಅಂತಕರು ಬಂದು |
ನಿಂತಾಗಲಿ ನಿನ್ನ ಚಿಂತೆ ಒದಗಲಿ 5
ಕನಸಿನೊಳಗೆ ನಿನ್ನ ನೆನಸಿಕೊಂಬಂತೆ |
ಮನಸು ಸುಸ್ಥಿರವಾಗಲಿ ಅನುಗಾಲವಿರಲಿ 6
ಇದ್ದಾಗ ದಾಸರದಾಸನೆನಿಸೊ ಬೇಗ |
ಸಿರಿ ವಿಜಯವಿಠ್ಠಲ ಕರುಣಿಸೊ 7
***
pallavi
karuNisO krSNA karunisO karuNisidarae nA ninnendigu mareya
caraNam 1
bhUtaLadoLu nAnu I tanuvutettu pAtakadali yamayAtaka paTTe
caraNam 2
indenna hrdayavembO mandiradoLu bandu vAsavAgO indirE ramaNA
caraNam 3
hindina avaguNa ondu eNisada mundu A dOshakke manaveragisade
caraNam 4
pApa puruSanembO pApiya kaige pOpagOlade enna kApADOranna
caraNam 5
antyakAladalli antakaru bandu ninitAgali ninne cinte odagali
caraNam 6
kanasinoLage ninna nenesikombante manasu susthiravAgi anugAlaveravi
caraNam 7
iddAga dAsara dAsanenisO bEga abdi shayana siri vijayaviThala karuNisO
***