Showing posts with label ನಿನ್ನ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ purandara vittala NINNA NAMBIDE NEERAJANAYANA ENNA PAALISO INDIRARAMANA. Show all posts
Showing posts with label ನಿನ್ನ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ purandara vittala NINNA NAMBIDE NEERAJANAYANA ENNA PAALISO INDIRARAMANA. Show all posts

Sunday 5 December 2021

ನಿನ್ನ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ purandara vittala NINNA NAMBIDE NEERAJANAYANA ENNA PAALISO INDIRARAMANA

Audio by Sri. Madhava Rao

ರಾಗ ಮೋಹನ ತ್ರಿಪುಟತಾಳ 

ನಿನ್ನ ನಂಬಿದೆ ನೀರಜನಯನ
ಎನ್ನ ಪಾಲಿಸೊ ಇಂದಿರಾರಮಣ ||ಪ||

ಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದ
ಪನ್ನಗಶಯನ ನೀ ಪರಮ ಪುರುಷನೆಂದು ||ಅ||

ಹರಿ ಸರ್ವೋತ್ತಮನಹುದೆಂಬೊ ಬಾಲಕನ
ಹಿರಣ್ಯಕಶಿಪು ಪಿಡಿದು ಬಾಧಿಸಲು
ನರಹರಿ ರೂಪದಿಂದವನ ವಕ್ಷವ ಸೀಳ್ದ
ವರ ವಿಶ್ವಾತ್ಮಕನಹುದೆಂದು ನಾ ಧೃಢವಾಗಿ ||

ಪಾದವ ಪಿಡಿದು ನೀರೊಳಗೆಳೆವ ನಕ್ರನ
ಬಾಧೆ ತಾಳದೆ ಕರಿ ಮೊರೆಯಿಡಲು
ಆದಿಮೂರುತಿ ಚಕ್ರದಿ ನಕ್ರನ ಕೊಂದ
ವೇದಾಂತವೇದ್ಯ ಅನಾಥ ರಕ್ಷಕನೆಂದು ||

ಇಳೆಯೊಡೆಯನ ತೊಡೆಗೆ ನೀನರ್ಹನಲ್ಲೆಂದು
ಲಲನೆ ಕೈ ಪಿಡಿದೆಳೆಯಲು ಕಂದನ
ನಳಿನಾಕ್ಷ ನಿನ್ನ ಮೊರೆಯ ಹೊಕ್ಕು ತಪಿಸಲು
ಒಲಿದು ಧ್ರುವಗೆ ನಿಜಲೋಕವಿತ್ತವನೆಂದು ||

ಸುದತಿ ಗೌತಮ ಸತಿ ಮುನಿ ಶಾಪದಿಂದಲಿ
ಒದಗಿ ಪಾಷಾಣರೂಪದಲಿರಲು
ಪದರಜದಿಂದಲಿ ಸತಿಯ ಮಾಡಿದ ಯೋಗಿ
ಹೃದಯಭೂಷಣ ನಿನ್ನ ಪಾದಮಹಿಮೆಯ ಕಂಡು ||

ಪರಮ ಪಾವನೆ ಜಗದೇಕ ಮಾತೆಯನು
ದುರುಳ ರಾವಣನು ಕದ್ದೊಯ್ದಿರಲು
ಶರಣೆಂದು ವಿಭೀಷಣ ಚರಣಕೆರಗಲಾಗಿ
ಸ್ಥಿರಪಟ್ಟವನು ಕೊಟ್ಟ ಪರಮಾತ್ಮನಹುದೆಂದು ||

ಅಂಬರೀಷನೆಂಬ ನೃಪ ದ್ವಾದಶಿ ವ್ರತ
ಸಂಭ್ರಮದಿ ಹರಿಗರ್ಪಿಸಲು
ದೊಂಬಿ ಮಾಡಿ ದೂರ್ವಾಸ ಶಪಿಸಲಾಗಿ
ಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು ||

ಧರೆಯೊಳು ನಿನ್ನ ಮಹಿಮೆಯ ಪೊಗಳುವರೆ
ಸರಸಿಜೋದ್ಭವ ಶೇಷರಿಗರಿದು
ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತ
ಪುರಂದರವಿಠಲ ನೀ ಜಗದೀಶನೆಂದು ||
***

pallavi

ninna nambide nIraja nayana enna pAliso indirA ramaNa

anupallavi

munna pAncAliya moreya lALisi kAida pannaga shayana nI parama puruSanendu

caraNam 1

hari sarvOttamanahudembo bAlakana hirNyakashipu piDidu bAdhisalu
narahari rUpadindavana vakSava sILda vara vishvAtmaganahudendu nA dhDhavAgi

caraNam 2

pAdava piDidu nIroLageLeva nakrana pAdhe tALade kari moreyiDalu
Adi mUruti cakradi nakrana konda vEdAnta vEdya anAtha rakSakanendu

caraNam 3

iLeyoDeyana toDege nInarhanellendu lalane kai piDideLeyalu kandana
naLinAkSa ninna mareya hokku tapisalu olidu dhruvage nijalOkavittavanendu

caraNam 4

sudati gautama sati muni shApadindali odagi pASANa rUpadaviralu
padarajadindali satiya mADida yOgi hrdaya bhUSaNa ninna mahimeya kaNDu

caraNam 5

parama pAvanane jagadEka mAteyanu duruLa rAvaNanu kaddoidiralu
sharaNendu vibhISaNa caraNakeragalAgi sthirapaTTavanu koTTa paramAtmanahudendu

caraNam 6

ambarISanemba nrpa dvAdashi vrta sambhramadi harigarbisalu
dombi mADi durvAsa shapisalAgi bembiDadale cakradinda kAidavanendu

caraNam 7

dhareyoLu ninna mahimeya pogaLuvare sarasijOdbhava shESarigaridu
smaraNe mAtradi ajAmiLage muktiyanitta purandara viTTala nI jagadIshanendu
***

[8:57 PM, 12/5/2019] SURESH HULIKUNTI RAO: ಪುರಂದರದಾಸರು ನಿನ್ನ ನಂಬಿದೆ ನೀರಜನಯನ ಎನ್ನ ಪಾಲಿಸೊಇಂದಿರೆರಮಣ ಪ

ಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದಪನ್ನಗಶಯನ ನೀಪರಮಪುರುಷನೆಂದುಅ.ಪ

ಹರಿಸರ್ವೋತ್ತಮನಹುದೆಂಬ ಬಾಲಕನಹಿರಣ್ಯಕಶಿವು ಪಿಡಿದು ಬಾಧಿಸಲು ||ನರಹರಿ ರೂಪಿಂದಲವನ ವಕ್ಷವ ಸೀಳ್ದೆಪರಮವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ1

ಪಾದವ ಪಿಡಿದು ನೀರೊಳಗೆಳೆದ ನಕ್ರನಬಾಧೆಗಾರದೆ ಕರಿಮೊರೆಯಿಡಲು ||ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದವೇದಾಂತವೇದ್ಯ ಅನಾಥ ರಕ್ಷಕನೆಂದು 2

ಇಳೆಗೊಡೆಯನ ತೊಡೆ ನಿನಗೇತಕೆಂದು ಆಲಲನೆಕೈ ಪಿಡಿದೆಳೆಯಲರ್ಭಕನ ||ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು 3

ಸುದತಿಗೌತಮಸತಿ ಮುನಿಶಾಪದಿಂದಲಿಪಢದಿ ಪಾಷಾಣವಾಗಿ ಬಿದ್ದಿರಲು ||ಮುದದಿಂದಲಾಕೆಯಮುಕ್ತಮಾಡಿದಯೋಗಿಹೃದಯ ಭೂಷಣ ನಿನ್ನ ಪದ ವೈಭವವ ಕಂಡು 4

ಪರಮಪಾವನೆ ಜಗದೇಕಮಾತೆಯನುದುರುಳರಾವಣ ಪಿಡಿದು ಕೊಂಡೊಯ್ಯಲು ||ಶರಣೆಂದು ವಿಭೀಷಣ ಚರಣಕೆರಗಲಾಗಿಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು 5

ಅಂಬರೀಷನೆಂಬನೃಪತಿದ್ವಾದಶಿಯನುಸಂಭ್ರಮದಿಂದ ಸಾಧಿಸುತಿರಲು ||ಡೊಂಬೆಯಿಂದದೂರ್ವಾಸಶಪಿಸಲಾಗಿಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು 6

ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆಸರಸಿಜೋದ್ಭವ-ಶೇಷಗಸದಳವು ||ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತಪುರಂದರವಿಠಲ ಜಗದೀಶ ನೀನೆಂದು7
***