Showing posts with label ಮುಂಚೆ ಕೈವಿಡಿದಂತೆ ಮಿಂಚೆನ್ನ prasannavenkata. Show all posts
Showing posts with label ಮುಂಚೆ ಕೈವಿಡಿದಂತೆ ಮಿಂಚೆನ್ನ prasannavenkata. Show all posts

Friday, 15 November 2019

ಮುಂಚೆ ಕೈವಿಡಿದಂತೆ ಮಿಂಚೆನ್ನ ankita prasannavenkata

by ಪ್ರಸನ್ನವೆಂಕಟದಾಸರು
ಮುಂಚೆ ಕೈವಿಡಿದಂತೆ ಮಿಂಚೆನ್ನ ಎದೆಗುಡಿಲಿಪಂಚಬಾಣನ ಜನಕನೆ ಪ.

ಸಂಚಿತಾರಬ್ಧಾಗಾಮಿ ಸಂಚಂಚಲಿಪ ಮನದ ಪ್ರಪಂಚವನು ಬಿಡಿಸು ತಂದೆ ನೊಂದೆ ಅ.ಪ.

ಭವಬವಣೆಗಳನು ಅನುಭವಿಸಿದನ ಸತ್ಕುಲೋದ್ಭವನ ಮಾಡಿದ ಕೃಪೆಗೆ ನವಭಕುತಿ ಕಲಿಸು ಎನ್ನವಗುಣವ ಬಿಡಿಸು ದಾನವವೈರಿನರಮುರಾರಿಶೌರಿ1

ಲೇಸು ಹೊಲ್ಲೆಯನರಿಯೆ ಲೇಶ ನಿಷ್ಠೆಯನರಿಯೆ ನಾಲೇಶದೊಳು ನಿನ್ನ ಮರೆದೆ ದಾಸಾಭಿಮಾನಿಯೆ ಸದಾ ಸರ್ವಕಾಲದಿ ಉದಾಸೀನವ ಮಾಡಬೇಡೈ ನೋಡೈ 2

ಸ್ಮøತಿಯೊಳಗೆ ಕೂಡಿ ವಿಸ್ಮøತಿಯ ಕೂಡೋಡಾಡಿಸ್ಮøತಿದಾರಿ ಕೊಳದು ಮನವು ಸ್ಮøತಿವಂದ್ಯ ಪ್ರಸನ್ವೆಂಕಟಸ್ಮಿತವದನದಾತಅಸ್ಮತ್ ಪಾಪ ಪಂಕಶೋಷ ನಿರ್ದೋಷ3
********