Showing posts with label ಮಾಧವನ ಚರಣಾರವಿಂದೆ ಪಾದೆ ಎದ್ದೋಡಿ vijaya vittala. Show all posts
Showing posts with label ಮಾಧವನ ಚರಣಾರವಿಂದೆ ಪಾದೆ ಎದ್ದೋಡಿ vijaya vittala. Show all posts

Wednesday, 16 October 2019

ಮಾಧವನ ಚರಣಾರವಿಂದೆ ಪಾದೆ ಎದ್ದೋಡಿ ankita vijaya vittala

ವಿಜಯದಾಸ
ಮಾಧವನ ಚರಣಾರವಿಂದೆ ಪಾದೆ ಪ

ಎದ್ದೋಡಿ ತಿರುಗಿ ನೋಡದೆ ಹೋಹವು
ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ
ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ 1

ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ
ವಂದನೆಯ ಮಾಡಿ ಸಾಷ್ಟಾಂಗೆರಗಲೂ
ದುರಿತ ರಾಸಿಗಳೆಲ್ಲ
ಒಂದು ಉಳಿಯದಂತೆ ಬೆಂದು ಹೋಹವು 2

ಅತಿವೇಗದಿಂದ ಬಂದು ಸ್ನಾನವನು ಮಾಡಲು
ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ
ಸಿರಿ ವಿಜಯವಿಠ್ಠಲನ್ನ
ಸ್ತುತಿಸಿ ಗತಿ ಪಡೆವಂತೆ ಧನ್ಯರನು ಮಾಡುವ ತಾಯಿ3
**********