ankita ಶ್ರೀರಾಮವಿಠಲ
ರಾಗ: [ಮಧ್ಯಮಾವತಿ] ತಾಳ: [ಮಿಶ್ರನಡೆ]
ಬಾರೊ ಗುರು ರಾಘವೇಂದ್ರ
ಯತಿಸಾರ್ವಭೌಮ ಪ
ವೀರ ಗುಣಗಂಭೀರ ಕರುಣಾಪೂರ್ಣ ಸಂಯುತ ದ್ವೈತ
ಗುರು ಮಧ್ವಾರ್ಯಚರಣಸರೋಜ ಸೇವಕ ಅ.ಪ
ಮಂತ್ರಾಲಯದ ಗುರುವೆ ಮನದಂತರಂಗದಿ
ಕಂತುಪಿತನ ತೋರಿಸೊ
ಸಂತಭಕ್ತರ ಸಂಗದಲಿ ನಾ
ನಿಂತು ಚರಣಸರೋಜಗೊಂದಿಪೆ 1
ಕರೆದಲ್ಲಿ ಬರುವನೆಂಬೊ ಬಿರುದುಳ್ಳ ಯತಿವರ
ತ್ವರಿತದಿ ವರವ ನೀಡೊ
ಪರಮ ಮಾನಸ ಮಂಟಪದಿ ನಾ
ಸ್ಮರಿಪ ಹರಿಯ ಸುಮೂರ್ತಿ ತೋರಲು 2
ಆಶ್ರಯದಾತ ಬಾರೊ ಸದಾಶಯ
ಭೂಸುರೇಂದ್ರನೆ ಬಾರೊ
ವಸುಧಿಜೆಯ ಕರಸೇವ್ಯ ಶ್ರೀರಾಮವಿಠಲನ ಮಾ-
ನಸಾಬ್ಧಿಸುಚಂದಿರನೆ 3
***