by ಪ್ರಸನ್ನವೆಂಕಟದಾಸರು
ನಿದ್ರೆಯ ಬಿಟ್ಟೇಳಿದಧಿಮಥಿಸುವೇಳಿ ಬಲಭದ್ರ ಬಾಲಕೃಷ್ಣರುಲುಹು ಕೇಳಬರುತಿದೆ ಗಡಾ ಪ.
ಗೊಲ್ಲರೆಳೆಯರ ಕೂಡಿ ಗೋಪಿಯ ಕುಮಾರರೀಗೆಚೆಲ್ಲಿಯಾಡಿ ಸೂರೆ ಮಾಡುತಾರೆ ಮೊಸರಚೆಲ್ಲೆಗಂಗಳೆಯರೊಳು ಸರಸವಾಡುತಲಿಹರೆಮೆಲ್ಲಗೆ ಸಪ್ಪಳಿಲ್ಲದೆ ಮನೆಯ ಪೊಗುವರಮ್ಮ 1
ಕೇರಿ ಕೇರಿಯೊಳು ಹುಯ್ಯಲಿಡುತ ಬಂದರದಕೊಚೀರುತೈದಾರೆ ಬೆನ್ನಟ್ಟಿ ನಾರಿಯರಕೊಆರಿಗೆ ವಶವಾಗರು ದೂರುತಾರೆ ಬಾಲೆಯರುಧೀರ ಚೋರರಲ್ಲುದಾರ ಗೋರಸ ಉಣ್ಣುತಾರವ್ವ 2
ಪೊಸಬೆಣ್ಣೆಯ ಕಂಡರೆ ಬಿಡರು ನಮ್ಮ ದೇವರಮೀಸಲಂಜಿಕೆಯಿಲ್ಲದುರುಳಮಕ್ಕಳಿಗೆಶಿಶುಗಳಟ್ಟುಳಿಯಾಗದ ಮುನ್ನೆಚ್ಚರವಮ್ಮಪ್ರಸನ್ನವೆಂಕಟಕೃಷ್ಣ ಬರುವ ನೋಡಿರಮ್ಮ 3
*********