Showing posts with label ಮನವ ಶೋಧಿಸಬೇಕು ನಿತ್ಯ ದಿನ purandara vittala MANAVA SHODHISABEKU NITYA DINA. Show all posts
Showing posts with label ಮನವ ಶೋಧಿಸಬೇಕು ನಿತ್ಯ ದಿನ purandara vittala MANAVA SHODHISABEKU NITYA DINA. Show all posts

Sunday 19 December 2021

ಮನವ ಶೋಧಿಸಬೇಕು ನಿತ್ಯ ದಿನ purandara vittala MANAVA SHODHISABEKU NITYA DINA






ಮನವ ಶೋಧಿಸಬೇಕೋ ನಿಚ್ಚ , ದಿನ
ದಿನಮಾಡುವ ಪಾಪ ಪುಣ್ಯದ ವೆಚ್ಚ ||

ಧರ್ಮ ಅಧರ್ಮ ವಿಂಗಡಿಸಿ ಅ-
ಧರ್ಮದ ನರಗಳ ಬೇರು ಕತ್ತರಿಸಿ
ನಿರ್ಮಲಾಚಾರದಿ ಚರಿಸಿ ಪರ-
ಬೊಮ್ಮಮೂರುತಿ ಪಾದಕಮಲವ ಭಜಿಸಿ ||

ಆತನವರಿಗೆ ಕೇಡಿಲ್ಲ . ಅವ -
ಪಾತಕ ಪತಿತ ಸಂಗವ ಮಾಡ್ವನಲ್ಲ
ನೀತಿವಂತರು ಕೇಳಿರೆಲ್ಲ , ನಮ-
ಗಾತನೆ ಗತಿ ಈವ ಪುರಂದರವಿಠಲ ||
***

ರಾಗ ನಾದನಾಮಕ್ರಿಯೆ ಛಾಪುತಾಳ (raga, taala may differ in audio)

ಮನವ ಶೋಧಿಸಬೇಕು ನಿಚ್ಚ
ದಿನದಿನ ಮಾಡುವ ಪಾಪ ಪುಣ್ಯದ ವೆಚ್ಚ ||
ಮನವ ಶೋಧಿಸಬೇಕು ನಿಚ್ಚ
ದಿನದಿನ ಮಾಡುವ ಪಾಪ ಪುಣ್ಯದ ವೆಚ್ಚ ||

ತನುವ ಖಂಡಿಸಿ ಒಮ್ಮೆ ಮಾಣೊ
ನಿನ್ನ ಮನವ ದಂಡಿಸಿ ಪರಮಾತ್ಮನ ಕಾಣೊ
ಕೊನೆಗೆ ನಿನ್ನೊಳಗೆ ನೀ ಜಾಣೊ
ಮುಕ್ತಿ ನಿನಗೆ ಬೇರಿಲ್ಲವೊ ಒಂದೇ ಗೇಣೊ || ೧||

ಆತನ ಭಕುತರಿಗೆ ಕೇಡಿಲ್ಲ
ಅವ ಪಾತಕ ಪತಿತ ಸಂಗವ ಮಾಳ್ವನಲ್ಲ
ನೀತಿವಂತರು ಕೇಳಿರೆಲ್ಲ
ನಮಗಾತನೆ ಗತಿ ಈವ ಪುರಂದರ ವಿಠಲ ||೨||
***


manava shOdhisabEku nicca
dinadina mADuva pApa puNyada vecca ||

tanuva khaMDisi omme mANo
ninna manava daMDisi paramAtmana kANo
konege ninnoLage nI jANo
mukti ninage bErillavo oMdE gENo ||1||

Atana bhakutarige kEDilla
ava pAtaka patita saMgava mALpanalla
nItivaMtaru kELiralla
namagAtane gati Iva puraMdara viThala ||2||
***

pallavi

manava shOdhisa bEkO niccA dIna dIna mADuva pApa puNyadda vecca

caraNam 1

dharma adharma vingaDisi adharmada naragaLa bEga kattarisi
nirmalAcAradi sarisi para bomma mUruti pAda kamalava bhjajisi

caraNam 2

tanuva khaNDisi omme mANO ninna manava daNDisi paramAtmanna kANO
konege ninnoLage nI jANO mukti nina dUrillavu ondE gENO

caraNam 3

Atanarivage kEDilla ava pAdaka pati sangava mADavanalla
nItivantaru kELirella nama kAdena gatiyIva purandara viTTala
***

 
ಮನವ ಶೋಧಿಸಬೇಕು ನಿತ್ಯ ದಿನ
ದಿನ ಮಾಡುವ ಪಾಪ ಪುಣ್ಯದ ವೆಚ್ಚ ।ಪ ।

ಧರ್ಮ ಅಧರ್ಮ ವಿಂಗಡಿಸಿ ಅ-
ಧರ್ಮದ ನರಗಳ ಬೇರ ಕತ್ತರಿಸಿ
ನಿರ್ಮಲಾಚಾರದಿ ಚರಿಸಿ ಪರ
ಬೊಮ್ಮ ಮೂರುತಿ ಪಾದಕಮಲವ ಭಜಿಸಿ ।೧।

ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀ ಜಾಣ ಮುಕ್ತಿ
ನಿನಗೆ ದೂರಿಲ್ಲವು ಒಂದೇ ಗೇಣೊ ।೨।

ಆತನ ಭಕುತರಿಗೆ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಡುವನಲ್ಲ
ನೀತಿವಂತರು ಕೇಳಿರೆಲ್ಲ ನಮ-
ಗಾತನೆ ಗತಿ ಈವ ಪುರಂದರವಿಠಲ ।೩।
**********
another version

ಮನವ ಶೋಧಿಸಬೇಕೋ ನಿಚ್ಚ
ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ || ಪ ||

ಧರ್ಮ-ಅಧರ್ಮ ವಿಂಗಡಿಸಿ ನೀ
ಅಧರ್ಮದ ನರಗಳ ಬೇರೆ ಕತ್ತರಿಸಿ
ನಿರ್ಮಲಾಚಾರವ ಚರಿಸಿ ಪರ
ಬ್ರಹ್ಮ ಮೂರುತಿ ಪಾದಕಮಲವ ಭಜಿಸಿ || ೧ ||

ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀನೇ ಜಾಣೋ ಮುಕ್ತಿ
ನಿನಗೆ ದೂರಿಲ್ಲವೋ ಅದೇ ಒಂದು ಗೇಣೋ || ೨ ||

ಆತನ್ನ ನಂಬಿ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಳ್ವನಲ್ಲ
ನೀತಿವಂತರೆ ಕೇಳಿರೆಲ್ಲ ನಮ-
ಗಾತನೆ ಗತಿಯೀವ ಪುರಂದರ ವಿಠಲ || ೩ ||
*******