Showing posts with label ಅಂಬುಜಾಕ್ಷನ ಬಂಟನೆನೆವರಿಗೆ prasannavenkata. Show all posts
Showing posts with label ಅಂಬುಜಾಕ್ಷನ ಬಂಟನೆನೆವರಿಗೆ prasannavenkata. Show all posts

Tuesday, 19 November 2019

ಅಂಬುಜಾಕ್ಷನ ಬಂಟನೆನೆವರಿಗೆ ankita prasannavenkata

ಪ್ರಸನ್ನವೆಂಕಟದಾಸರು

ಅಂಬುಜಾಕ್ಷನಬಂಟನೆನೆವರಿಗೆ 
ನಂಟನಿಂಬರಿಗೆ ನೆಲೆವಂತ ವರದ ಹನುಮಂತ ಪ.

ಜಲಧಿಯನು ದಾಂಟಿ ಜಾನಕಿಗೆ ತಲೆವಾಗಿ 
ನೀನಲಿದಕ್ಷಯ ನಿಶಾಟಾದ್ಯರರಿದೆಸತಿರಘುಕುಲೇಂದ್ರ
ನಂಘ್ರಿಯ ಕಂಡು ಅಸಹಾಯದಿಹÀಲವು ಸಾಹಸ 
ಮಾಡಿದಖಿಳ ಕಪಿನಾಥ 1

ಕಿರ್ಮೀರ ಬಕ ಹಿಡಿಂಬಕ ಕೀಚಕಾದಿಖಳದುರ್ಮತಿ ಕದಳಿವನಕೆಮತ್ತಕರಿಯೆನಿರ್ಮಳಾನನೆ 
ದ್ರೌಪದಿಯ ಭಂಗಪಡಿಸಿದ ಕುಕರ್ಮಿ ಕೌರವರಿಗಶನಿಯೆ 2

ಶ್ರೀ ಬಾದರಾಯಣಾಜÕದಿ ತತ್ವಸಾರಾರ್ಥನೀ ಬೋಧಿಸಿದೆ 
ನಿಜ ವೈಷ್ಣವ ಜನಕೆಈ ಭುವಿಗೆ ಕಶ್ಮಲ ಕುವಾದಿಗಳ ಗೆದ್ದಬ್ಜನಾಭಿ ಪ್ರಸನ್ನವೆಂಕಟೇಶಗರ್ಪಿಸಿದೆ 3
*******