..
kruti by Nidaguruki Jeevubai
ಬೆಳಗಾಯಿತು ಏಳಿ
ನಳಿನನಾಭನ ಪಾದ ನಳಿನ ಸೇವಕರು ಪ
ಉದಯ ಕಾಲದೊಳೆದ್ದು ಹೃದಯ ನಿರ್ಮಲರಾಗಿ
ಮಧುಸೂದನನ ಪಾಡಿ ಸ್ತುತಿಸುತಲಿ
ಮುದದಿಂದ ಮಾಧವನ ವಿಧವಿಧದಿ ಪೂಜಿಸಿ
ಪದುಮನಾಭನ ಪಾಡಿ ಪೊಗಳುವ ಜನರು 1
ರಂಗನ ಮಹಾದ್ವಾರದ ಮುಂದೆ ಕಾಣುವ
ಶೃಂಗಾರದ ಗಜ ಸಾಲುಗಳ ನೋಡುತ
ಬಂಗಾರ ಕೋಡುಳ್ಳ ಗೋವ್ಗಳಿಗೆರಗುತ್ತ
ಅಂಗಜ ಜನಕನ ಪಾಡಿ ಪೊಗಳುವರು2
ರಂಭೆ ಊರ್ವಶಿ ಮೇನಕೆಯರೆಲ್ಲರು ಕೂಡಿ
ಸಂಭ್ರಮದಲಿ ನಾಟ್ಯವಾಡುತಿರೆ
ಗಂಗೆ ಗೋದಾವರಿ ಕೃಷ್ಣ ತುಂಗಭದ್ರೆ ಯಮುನೆಯರು
ಇಂಬಿಲ್ಲದೆ ಪಾಡುತಿಹರೊ ಶ್ರೀ ಹರಿಯ 3
ಅತ್ರಿ ವಸಿಷ್ಠ ಗೌತಮ ಭಾರದ್ವಾಜರು
ಅರ್ಥಿಯಲ್ಲಿ ಜಮದಗ್ನಿ ಋಷಿಗಳೆಲ್ಲ
ಸ್ತೋತ್ರಮಾಡುತ ಪುರುಷೋತ್ತಮನನು ಪಾಡಿ
ವಿಶ್ವಾಮಿತ್ರರು ಬಹು ಭಕ್ತಿಯಲಿ 4
ಸುತ್ತ ಸನಕಾದಿ ನಾರದರೆಲ್ಲ ಪಾಡಲು
ನೃತ್ಯಗಾಯನದಿಂದ ಶ್ರೀ ಕೃಷ್ಣನ
ಅರ್ತಿಯಿಂದ ಅಜಭವ ಸುರರೆಲ್ಲ ಸ್ತುತಿಸಲು
ಸ್ತೋತ್ರಮಾಡಲು ದುರ್ಗದೇವಿಯರು5
ಗಜರಾಜ ಗೋಮಾತೆ ಮೊದಲಾದವರು ಬಂದು
ಮಧುಸೂದನನ ನೋಡೆ ನಿಂತಿಹರು
ಮದಗಜಗÀಮನೇರು ಮುದದಿ ಕಲಶ
ಕನ್ನಡಿಗಳ ಪಿಡಿದು ನಿಂತಿಹರು ಬೇಗದಲಿ 6
ಮುತ್ತಿನ ಕದಗಳು ತೆಗೆವ ವ್ಯಾಳ್ಯದಲಿ
ನೌಬತ್ತು ನಗಾರಿ ವಾದ್ಯಗಳಾಗಲು
ಸಪರ್Àನ್ಹಾಸಿಕೆಯಲ್ಲಿ ಮಲಗಿರುವ ದೇವನ
ಅರ್ಥಿವೈಭವ ನೋಡೊ ವೇಳೆ ಮೀರುವದು7
ಗಂಗಾಜನಕನ ಚರಣಂಗಳು ನೋಡುವ
ಬಂಗಾರ ಕಿರುಗಂಟೆಗಳ ನಡುವನು ನೋಡುವ
ರಂಗು ಕೇಸರಿಯ ಪೀತಾಂಬರ ನೋಡುವ
ಶೃಂಗಾರ ವೈಜಯಂತಿಯ ನೋಡುವ 8
ವಕ್ಷ ಸ್ಥಳದಲ್ಲಿ ಶ್ರೀ ಲಕ್ಷ್ಮಿಯ ನೋಡುವ
ಹಸ್ತದ ಆಭರಣಂಗಳ ನೋಡುವ
ಮುತ್ತಿನ ಭುಜ ಕೀರ್ತಿ ರತ್ನದ್ಹಾರಗಳಿಂದ
ಒಪ್ಪುವ ಉರದಿ ಶ್ರೀವತ್ಸನ ಸ್ತುತಿಸೆ 9
ಕೋಟಿ ಸೂರ್ಯರ ಕಾಂತಿ ಸೋಲಿಪ ನಗುಮುಖ
ಲಲಾಟದಿ ಕಸ್ತುರಿ ತಿಲಕ ಒಪ್ಪಿರಲು
ಮಾಟದ ಕರ್ಣಕುಂಡಲಗಳು ಹೊಳೆಯುತ್ತ
ನೋಟದಿ ಜಗವ ಮೋಹಿಪ ದೇವನನು ನೋಡೆ10
ಅಂದದ ಮುಗುಳು ನಗೆಯು ದಂತ ಪಂಙÉ್ತಯು
ಸುಂದರ ಪಾದ ಕದಪುಗಳಂದವು
ಇಂದ್ರ ನೀಲದಮಣಿ ಖಚಿತ ಕಿರೀಟದ
ಮಂದಹಾಸದ ನಗೆÀಮುಖ ನೋಡುವ 11
ಕಡೆಗಣ್ಣ ನೋಟದಿ ಜಗವ ಸೃಷ್ಟಿಪದೇವ
ಖಗವಾಹನನು ಸಂರಕ್ಷಿಪ ಲೋಕವ
ಅಗಣಿತ ಮಹಿಮ ಅತಿಶಯದಿ ಲಯವ ಮಾಳ್ಪ
ಸುಗುಣ ಸುಂದರನ ಗುಣ ಪೊಗಳುವ ಜನರು12
ಸಕಲ ಸದ್ಗುಣ ಭರಿತ ನಿಖಿಳ ವ್ಯಾಪಕ ಕೃಷ್ಣ
ಶುಕಮುನಿ ವಂದಿತ ದಿವ್ಯ ಚರಣನ
ರುಕುಮಿಣಿ ಅರಸನ ಭಕುತರ ಪೋಷನ
ಸಖ್ಯದಿಂದ ಪ್ರಿಯನ ನೋಡುವ ಸುಜನರು13
ಅನಿರುದ್ಧ ದೇವ ಶ್ರೀ ಪ್ರದ್ಯುಮ್ನ ಮೂರ್ತಿಯ
ಸಂಕರುಷಣ ವಾಸುದೇವೇಶನ
ನಾರದ ವಂದ್ಯ ನವನೀತ ಚೋರನ
ನಾರಾಯಣನ ನಾಮ ಸ್ಮರಿಸುವ ಸುಜನರು 14
ಕವಿಜನ ಪ್ರಿಯನ ಕಮನೀಯ ರೂಪನ
ಕಮಲನಾಭವಿಠ್ಠಲನ ಪಾಡುವ
ಕಮಲಸಖನ ಸೋಲಿಸುವ ಮುಖಕಾಂತಿಯ
ಕಮಲಾಕ್ಷಿಯರಸನ ಪೊಗಳುವ ಸುಜನರು15
***