Showing posts with label ಮನ್ನಿಸೆನ್ನ ಮಧುಸೂದನ ಮದನನಯ್ಯ hayavadana MANNISENNA MADHUSUDANA MADANANAYYA. Show all posts
Showing posts with label ಮನ್ನಿಸೆನ್ನ ಮಧುಸೂದನ ಮದನನಯ್ಯ hayavadana MANNISENNA MADHUSUDANA MADANANAYYA. Show all posts

Saturday, 11 December 2021

ಮನ್ನಿಸೆನ್ನ ಮಧುಸೂದನ ಮದನನಯ್ಯ ankita hayavadana MANNISENNA MADHUSUDANA MADANANAYYA



ಮನ್ನಿಸೆನ್ನ ಮಧುಸೂದನ ಪ.


ಮದನನಯ್ಯ ಮೋಹನಕಾಯಉನ್ನತಗುಣನಿಲಯ ಉಡುಪಿನ ಕೃಷ್ಣರಾಯ ಅ.ಪ.


ಶ್ರುತಿಗಳ ತಂದೆ ಮುನ್ನ ಸುರಮುನಿಗಳ ಮನ-ಕತಿ ಹರುಷವ ಕೊಟ್ಟೆ ಅಗಣಿತಗುಣರನ್ನಯತಿಗಳ ಪಾಲಿಸಿದೆ ಮುಂದುವರಿವದಿತಿಜರ ಸೋಲಿಸಿದೆ ಈ ಮಹಿಯೊಳುಮತಿವಂತರ ಪೊರೆದೆ ಮಹಿಮೆಯಿಂದ ಮೆರೆದೆ1


ಅಚ್ಚಹಾರಶೋಭಿತ ಕಂಠ ಆಶ್ರಿತರಿಗೆ ನೀ ನಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ[ಭಕ್ತÀ್ತ]ವೈಕುಂಠದಮುಚ್ಚಳ ತೆಗೆಸಲು ಶಕ್ತ ಅಚ್ಚುತ ನಿನ್ನಅರ್ಚಿಸಿದವ ಕೃತಾರ್ಥ ಅವನೆ ಸರ್ವಸಮರ್ಥ2


ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳುವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದತಂದೆ ನೀನೆ ತಾಯಿ ನೀನೆ ಹಯವದನಬಂಧು ನೀನೆ ಬಳಗ ನೀನೆ ಮತ್ತದರಿಂದಕುಂದುಮಾಡುವುದು ಬಿಡೋ ಕಂಡು ಕರುಣವ ಮಾಡೋ 3

***