Showing posts with label ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ hayavadana BAARAI NINNA MUDDU MOGAVANU TORAI YADUTILAKA. Show all posts
Showing posts with label ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ hayavadana BAARAI NINNA MUDDU MOGAVANU TORAI YADUTILAKA. Show all posts

Wednesday, 1 December 2021

ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ ankita hayavadana BAARAI NINNA MUDDU MOGAVANU TORAI YADUTILAKA

 


ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ ಎಂ-ದೋರಂತೆ ಮುದ್ದಿಸಿ ಯಶೋದೆÉ ಕುಮಾರನ ಬಾಯೆಂದಳೈ ಪ.


ಥೈ ಥೈ ಥೈ ಥೈ ಥೈಯಿಥೈಯಿ ಥೈಯಿ ಥೈಯಿ ಥೈಯಿಥೈ ಥೈ ಥೈಯೆಂದು ಕೃಷ್ಣನ ಪಾಡಿದಳೆ1


ಕೃಷ್ಣ ನಿನ್ನ ಮಕ್ಕಳಾಟಿಕೆ ಕಷ್ಟರಿಗೆ ಕಾಲಕೂಟವಾಯಿತುದುಷ್ಟದೈತ್ಯ ಮತ್ತ ಮಾತಂಗಗಳಟ್ಟುವ ಸಿಂಹದ ಮರಿಯೆ 2


ದೀಪ್ತೋಷ್ಣ ಕಿರಣನು ಬರೆ ಕತ್ತಲೆಯತ್ತಲೆ ಪೋಪುದುಮತ್ತಿತ್ತ ಸುತ್ತಮುತ್ತಸುಳಿವುದೆ ಚಿತ್ತಜನ ಪೆತ್ತ ಹರಿಯೆ 3


ಚೆಂದದ ನಿನ್ನ ಚೆಲ್ವ ಸಿರಿಮೊಗದಂದವನು ತನಗಿಲ್ಲವೆಂದುಕಂದಿಕುಂದಿದಳಿಂದಿರೆ ಮರುಳಾಗಿ ಕಂದ ನಿನ್ನ ಹೊಂದಿ ನಿಂದಳೊ 4


ಇಂಥ ಸಿರಿಹಯವದನ ನಿನ್ನಂಥದೇವನು ದಾವನುಪಂಥವೇ ನಿನ್ನಗೂಡೆ ಗುಣಮಣಿತಿಂತಿಣಿಯಂತೆ ನೀನು 5

***