Showing posts with label ನಂಬು ನಂಬು ನಂಬು ಮನವೆ ಅಂಬುಜಾಕ್ಷನ jayesha vittala. Show all posts
Showing posts with label ನಂಬು ನಂಬು ನಂಬು ಮನವೆ ಅಂಬುಜಾಕ್ಷನ jayesha vittala. Show all posts

Thursday, 5 August 2021

ನಂಬು ನಂಬು ನಂಬು ಮನವೆ ಅಂಬುಜಾಕ್ಷನ ankita jayesha vittala

 ..

ನಂಬು ನಂಬು ನಂಬು ಮನವೆ

ಅಂಬುಜಾಕ್ಷನ ಪ್ರಭುವ ಪಾದ

ಇಂಬು ನಿನಗೆ ದೊರಕುವುದು

ತುಂಬಿ ಮಂಗಳ ಪ


ದುಷ್ಟ ಅನ್ನ ದುಷ್ಟ ಸಂಗ

ಭ್ರಷ್ಟ ಭಾವದಿಂದ ಮನವು

ಕೆಟ್ಟು ಬೆದರಿ ಸವಿಯುಗೊಳ್ಳದು

ಶಿಷ್ಟರನುಭವ 1


ಸತ್ಯಹರಿಯು ಜಗದ್ಗುರುವು

ಸತ್ಯ ಮಧ್ವಶಾಸ್ತ್ರ ಫಲವು

ಸತ್ಯ ಮಹಿಮ ಗುರುಕರುಣ

ಸತ್ಯ ನಿತ್ಯದಿ 2

ಭಾರತ ಭಾಗವತವ ಕೇಳು

ಭರತನಣ್ಣನ ಚರಿತೆ ಕೇಳು

ಖರೆಯು ಹರಿಯ ಭಕ್ತರೀಗೆ

ನಿರುತ ಮಂಗಳ 3


ನಿರುತ ವಿದಯ ಲೋಭಿಗಳ

ದುರುಳ ದುರ್ಬಲ ಭಾವ ತಿಳಿದು

ಹರಿಯ ಮೆರೆಯೆ ಸಕಲ ಭಯವು

ಮರುಳು ಮಾಳ್ಪವು 4


ಕರಿಯ ಧ್ರುವನ ಅಸುರ ಬಾಲನ

ನರನ ಸತಿಯು ಭೀಷ್ಮ ಕುಚೇಲ

ವರದ ದೇವನ ದಾಸರ ಭಜಿಸು

ನಿರುತ ದೃಢದಲಿ 5


ಹಿಂದೆ ಎಷ್ಟೊ ಕಾಲದಿಂದ

ಕುಂದು ನೋಡದೆ ನಿನ್ನ ಬಿಡದೆ

ಮುಂದು ತಂದ ಬಗೆಯ ತಿಳಿಯೊ

ಸಂದೇಹ ಪೋಪದು 6


ಕಾಲಿಗೆ ಬಿದ್ದ ದೀನರನ್ನು

ಕಾಲ ಕರ್ಮ ಮೀರಿ ಪೊರೆವ

ಬಾಳ ಕರುಣಿ ಮಹಾ

ವಿಜಯ ರಾಮಚಂದ್ರನು7


ಹಿಂದೆ ಪೇಳ್ದ ವಾಕ್ಯವೆಲ್ಲಿ

ಇಂದು ಬಿಡದೆ ಫಲಿಸುವೋವು

ಮಂದನಾಗದೆ ಪ್ರಭುವ ಪಾದ

ದ್ವಂದ್ವ ಬಿಡದಿರು 8

ನಿತ್ಯ ಹನುಮ ಭೀಮ-ಮಧ್ವ

ಭೃತ್ಯರ ಶಿರೋರತನುನಿವನು

ಸತ್ಯ ಮಹಿಮ ಜಯೇಶವಿಠ-

ಲಾಪ್ತ ಸತ್ಯವು 9

***