..
ಪಕ್ಷಿವಾಹನ ಸತ್ಯಭಾಮೆ ಸದನದ್ವಾರದಿ ನಿಂತು ಸದನದ್ವಾರದಿ
ಮಿತ್ರೆ ಎನಗೆ ಕದವ ತೆಗೆಯೆ ಬರುವೆ ತೀವ್ರದಿ 1
ಸಾಕೊ ಸಾಕೊ ನಿನ್ನ ಸಂಗ ಯಾಕೊ ಕೃಷ್ಣನೆ ನಮಗಿನ್ಯಾಕೊ ಕೃಷ್ಣನೆ ಅ-
ನೇಕ ಸ್ತ್ರೀಯರಿಂದ ರಮಿಸ್ಹೋಗಾದಿ ಪುರುಷನೆ 2
ಕೋಪವ್ಯಾಕೆ ಕಾಂತೆ ಮನದ ವಾಕು ತಿಳಿಯದೊ ಎನಗೀ ವಾಕು ತಿಳಿಯದೊ ವಿ-
ವೇಕದಿಂದ ನಿಂತು ಪೇಳೆ ಮಾತುಯೆನ್ನೊಳು 3
ಎನ್ನ ಬಿಟ್ಟು ಅನ್ಯಸ್ತ್ರೀಯರ ಮನೆಗೆ ಪೋಗುವಿ ಸ್ತ್ರೀಯರ ಮನೆಗೆ ಪೋಗುವಿ
ಘನ್ನ ಘಾತಕತನದಿಂದಿಲ್ಲಿಗಿನ್ನು ಬರುವರೆ 4
ಅನ್ಯಸ್ತ್ರೀಯರೆಂಬುವೋರು ಇನ್ನ್ಯಾರೆನಗ್ಹೇಳೆ ಭಾಮೆ ಇನ್ನ್ಯಾರೆನಗ್ಹೇಳೆ
ನಿನ್ನ ಸರಿಯಸವತೇರೆನಗೆ ಸತಿಯರಲ್ಲವೆ 5
ಅತ್ತಸಾಗೊ ರುಕ್ಮಿಣಿ ಒಲವು ಚಿತ್ತವ್ಹಿಡಿಯದೆ ಆಕೆ ಚಿತ್ತವ್ಹಿಡಿಯದೆ
ಲೆತ್ತಪಗಡೆನಾಡದ್ಹೀಗೆ ಇತ್ತ ಬರುವರೆ6
ಕಾಳಕತ್ತಲು ಪ್ರಳಯಜಲದಿ ಕಾದುಕೊಂಡೆನ್ನ ಇರುವೋಳು ಕಾದುಕೊಂಡೆನ್ನ
ಆದಿಲಕ್ಷ್ಮಿ ಮುನಿದರೆನಗಿನ್ನಾ ್ಹ್ಯಗೆ ಭಾಮಿನಿ 7
ಜಾಂಬುವಂತೇರ್ಹಂಬಲಬಿಟ್ಟು ಬಂದ ಕಾರಣ ನೀನು ಬಂದ ಕಾರಣ ಆ-
ನಂದ ಬಡಿಸುತವರ ಗೃಹದಲ್ ಹೊಂದಿಕೊಂಡಿರು 8
ಜಾಂಬುವಂತೇರಿಂದ ಬಂದ ನಿಂದ್ಯ ಕಳೆದನೆ ನಾ ಅಪನಿಂದ್ಯ ಕಳೆದೆನೆ
ತಂದು ರತ್ನತೋರಿ ನಿನ್ನ ತಂದೆ ಭಾಮಿನಿ 9
ಕಮಲನಾಭ ಕಾಳಿಂದಿ ಕಳವಳಿಸುವಳೊ ಕಾಣದೆ ಕಳವಳಿಸುವಳೊ ಕಾಣದೆ
ಕಾಲಕಳೆಯೊದ್ಯಾ ್ಹಗಿನ್ನಾಕೆ ಆಲಯಕೆ ಪೋಗೊ 10
ಗಾಳಿಮಳೆಯ ಸಹಿಸಿ ಕಾಳಿಂದಿತೀರದಿ ಇರೆ ಕಾಳಿಂದಿತೀರದಿ ಇರೆ
ಭಾಳ ತಪಸಿಲ್ವಲಿಸಿ ಭಾರ್ಯಳಾದ ಬಗೆ ನೀ ಅರಿಯದೆ 11
ನೀಲವರ್ಣ ನೀಲಾದೇವಿ ನಿನ್ನ ಕಾಣದೆ ಇರುವಳು ನಿನ್ನ ಕಾಣದೆ
ನಿರೀಕ್ಷೆಲಿರಲು ನಿನ್ನ ಗಮನ ನಿಲ್ಲದೆ ನೀ ಪೋಗೊ 12
ಸಪ್ತಗೂಳಿ ಕಟ್ಟಿ ನಾ ಸಮರ್ಥನೆನಿಸಿದೆ ಬಲು ಸಮರ್ಥನೆನಿಸಿದೆ
ಅದರಿಂದಷ್ಟೂರೊಳಗೆ ನೀಲ ನನಗೆ ಶ್ರೇಷ್ಠಳಲ್ಲವೆ 13
ಪದ್ಮನಾಭ ಭದ್ರೆಯಿಂದ ಭಾಳ ಹರುಷವೊ ನಿಮಗೆ ಭಾಳ ಹರುಷವೊ
ಎದ್ದು ಪೋಗಾಕಿದ್ದಸ್ಥಳಕಿಲ್ಲಿರಲು ಸಲ್ಲವೊ 14
ಅರಸರಾಕೆ ಅಗ್ರಜರೈವರು ಕರೆಸಿ ಕೇಳೋರೆ ಎನ್ನ ಕರೆಸಿ ಕೇಳೋರೆ
ಹೋಗಿ ಹರುಷ ಬಡಿಸದಿರಲು ಆಕೆನ್ನರಸಿ ಅಲ್ಲವೆ 15
ಮಿತ್ರೆವಂತಿ ಪಟ್ಟೆಮಂಚ ಬಿಟ್ಟು ಬರುವಾಕೆ ಇಲ್ಲಿಗೆ ಬಿಟ್ಟು ಬರುವಾಕೆ
ಆಕೆ ಸಿಟ್ಟಿಲಿಂದ ದೃಷ್ಟಿತೆಗೆದು ಎನ್ನ ನೋಡಳೆ 16
ಅತ್ತೆ ಮಗಳು ಮಿತ್ರೆಯೆನಗತ್ಯಂತ ಪ್ರೇಮಳೆ ಎನಗತ್ಯಂತ ಪ್ರೇಮಳೆ
ನಿನಗೆ ಇಷ್ಟು ಕ್ರೋಧ ನಿಷ್ಠೂರ್ವಚನ ಬ್ಯಾಡೆ ಭಾಮಿನಿ 17
ಲಕ್ಷ್ಯ ಏನು ಎನ್ನ ಮನೆ ಅಲಕ್ಷ್ಯವಲ್ಲವೇ ನಾನಲಕ್ಷ್ಯವಲ್ಲವೆ ನಿನಗೆ
ಲಕ್ಷಣ ದೇವೇರಲ್ಲಿ ಭಾಳಾಪೇಕ್ಷವಲ್ಲವೆ18
ಲಕ್ಷ್ಯಹೊಡೆದು ಮತ್ಸ್ಯಕೆಡವ್ಯಪೇಕ್ಷೆಯಿಂದಲಿ ಭಾಳಪೇಕ್ಷೆಯಿಂದಲಿ
ನಾನು ಲಕ್ಷಣೆಯನೆ ತಂದೆ ಕೇಳೆ ಸತ್ಯಭಾಮೆ ನೀ 19
ಹತ್ತು ಆರು ಸಾವಿರ-ಶತ ಪತ್ನೇರಿಲ್ಲವೆ ನಿನಗೆ ಪತ್ನೇರಿಲ್ಲವೆ ತಿರುಗಿ
ಸುತ್ತಿ ಸುತ್ತಿ ಹಾದಿ ಹೀಗೆ ತಪ್ಪಿಬರುವರೆ 20
ದಾರಮನೆಗೆ ಹೋಗಲೆನ್ನ ದೂರು ಮಾಡೋರೇ ಹೀಗೆ ದೂರು ಮಾಡೋರೇ ಸ್ವಾಮಿಪಾರಿಜಾತಕೊಟ್ಟ ಸತಿಯಲ್ಲೊ ್ಹೀಗಿರೆಂಬರೆ 21
ಸರಸವಾಡದಿರೊ ಶ್ರೀರಮಣ ಅರಸೇರ್ಯಾತಕೊ ನಿನಗೆ ಅರಸೇರ್ಯಾತಕೊ
ಹರುಷದಿಂದ ಎರಗದೆನ್ನ ಶಿರಸಿದ್ಯಾತಕೊ 22
ಶ್ರೀಶ ಎನ್ನ ಮನದಲಿರೊ ಭೀಮೇಶಕೃಷ್ಣನೆ ಇರೊ ಭೀಮೇಶಕೃಷ್ಣನೆ
ನಿನ್ನ ವಿಲಾಸ ಬಯಸದಿರುವರ್ಯಾರೊ ಇಂದಿರೇಶನೆ 23
***