Showing posts with label ಇರಬಂದುದಿಲ್ಲ ಸಂಸಾರ ಇದನರಿತುಸಿರಿಹರಿಯ ಭಜಿಸುವುದು ಸಾರ neleyadikeshava. Show all posts
Showing posts with label ಇರಬಂದುದಿಲ್ಲ ಸಂಸಾರ ಇದನರಿತುಸಿರಿಹರಿಯ ಭಜಿಸುವುದು ಸಾರ neleyadikeshava. Show all posts

Wednesday 1 September 2021

ಇರಬಂದುದಿಲ್ಲ ಸಂಸಾರ ಇದನರಿತುಸಿರಿಹರಿಯ ಭಜಿಸುವುದು ಸಾರ ankita neleyadikeshava

 ..

ಇರಬಂದುದಿಲ್ಲ ಸಂಸಾರ - ಇದನರಿತುಸಿರಿಹರಿಯ ಭಜಿಸುವುದು ಸಾರ ಪ


ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ 1


ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ 2


ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ 3

***