Showing posts with label ಸ್ಮರಿಸಿ ಬದುಕಿರೊ ಗುರುವರರಾ ನರಹರಿ ಸ್ಮರಣೆ kamalanabha vittala. Show all posts
Showing posts with label ಸ್ಮರಿಸಿ ಬದುಕಿರೊ ಗುರುವರರಾ ನರಹರಿ ಸ್ಮರಣೆ kamalanabha vittala. Show all posts

Thursday, 5 August 2021

ಸ್ಮರಿಸಿ ಬದುಕಿರೊ ಗುರುವರರಾ ನರಹರಿ ಸ್ಮರಣೆ ankita kamalanabha vittala

 ..

kruti by Nidaguruki Jeevubai


ಸ್ಮರಿಸಿ ಬದುಕಿರೊ ಗುರುವರರಾ ನರ-

ಹರಿಸ್ಮರಣೆ ಮರೆಯದಲೆ ಕೀರ್ತಿಸಿ ನಲಿದವರ ಪ


ದಾಸದೀಕ್ಷೆಯ ವಹಿಸಿದವರ ಹರಿ

ದಾಸರ ಕೂಡಿ ನರ್ತಿಸಿ ನಲಿದವರ

ಶ್ರೀಶನ ಮಹಿಮೆ ಬಲ್ಲವರ

ಭವ ಪಾಶಗಳಳಿವ ಸನ್ಮಾರ್ಗಬೋಧಕರ 1


ಬಡತನದಲಿ ಬಳಲಿದವರ ಭಾಗ್ಯ

ಬಿಡದೆ ಬಂದೊದಗೆ ಹಿಗ್ಗದೆ ತಗ್ಗಿದವರ

ಮೃಡಸಖನೊಲುಮೆ ಪಡೆದವರ

ಬಹು ಸಡಗರದಲಿ ಹರಿ ಭಜನೆ ಮಾಡ್ದವರ 2


ಪಂಕಜಾಕ್ಷನ ಪೊಗಳಿದವರ ತಂದೆ

ವೆಂಕಟೇಶ ವಿಠ್ಠಲ ದಾಸರಿವರ

ಬಿಂಕದಿ ಹರಿಯ ಮರೆತವರ ಗರ್ವ

ಬಿಂಕಗಳಳಿಯ ಸನ್ಮಾರ್ಗಕೆಳದವರ3


ತಾಳ ತಂಬೂರಿ ಪಿಡಿದವರ ಗೆಜ್ಜೆ

ತಾಳ ಮೇಳದಿ ನರ್ತಿಸಿ ನಲಿದವರ

ವ್ಯಾಳ ಶಯನನ ಭಕ್ತರಿವರ ಸಂಜೆ

ವೇಳೆ ಹರಿಭಜನೆ ಮಾಡಿ ನಲಿದವರ 4


ಮಡದಿ ಮಕ್ಕಳು ಬಂಧು ಜನರ ಕೂಡಿ

ಕಡು ಸಂಭ್ರಮದಿ ಹರಿಭಜನೆ ಮಾಡ್ದವರ

ಕಡಲ ಶಯನನ ಭಕ್ತರಿವರು ಭಾಗ್ಯ

ಬಡತನ ಸಮವೆಂದು ತಿಳಿಯ ಹೇಳ್ದವರ 5


ಹರಿಗುಣ ಕೀರ್ತಿಸಿದವರ ನರ

ಹರಿಯ ಮಹಿಮೆಗಳ ಶಿಷ್ಯರಿಗೊರೆದವರ

ಹರಿಯೆ ಸರ್ವೋತ್ತಮನೆಂದವರ ನಮ್ಮ

ಉರುಗಾದ್ರಿವಾಸ ವಿಠ್ಠಲನ ನಂಬಿದವರ6


ಮಮತೆಯ ಬಿಡಬೇಕೆಂದವರ ದೇಹ

ಮಮತೆಯ ಬಿಡುತ ಹರಿಪುರ ಸೇರಿದವರ

ಕಮಲಾಕ್ಷನ ಭಕ್ತರಿವರ ನಮ್ಮಕಮಲನಾಭನ ವಿಠ್ಠಲನ ನಂಬಿದವರ 7

***