Showing posts with label ಪವಮಾನ ರಾಯಾ ಪಾವನ ಕಾಯಾ pranesha vittala. Show all posts
Showing posts with label ಪವಮಾನ ರಾಯಾ ಪಾವನ ಕಾಯಾ pranesha vittala. Show all posts

Wednesday, 13 November 2019

ಪವಮಾನ ರಾಯಾ ಪಾವನ ಕಾಯಾ ankita pranesha vittala

by ಪ್ರಾಣೇಶದಾಸರು
ಪವಮಾನ ರಾಯಾ ಪಾವನ ಕಾಯಾ | ಕಾಯೋದಿವಿಷತ್ಪೂಜಿತ ಕವಿಜನ ಗೇಯ ಪ

ಭಕ್ತವತ್ಸಲ ದೇವ ರವಿತೇಜ | ಸರ್ವೋ-ದ್ರಕ್ತ ಪ್ರಣತ ಜನ ಸುರಭೂಜ||ಶಕ್ತ ಲೋಕೈಕ ಅನಂತಜ |ಭುಕ್ತಿಮುಕ್ತಿದ ದಿತಿಜಾಹಿ ದ್ವಿಜರಾಜ1

ದುರಿತಾಂಬುಧಿ ಘಾಗಜ ಕಾಳೀಶ | ಸರ್ವಸುರವಂದ್ಯ ಪದಕಂಜ ನಿರ್ದೋಷಾ ||ಪುರರಿಪುಪಿತ ಪಯೋಧರ ಭಾಸ | ಸಾರೆ-ಗರೆದು ಪೂರ್ತಿಸೊ ಯನ್ನ ಅಭಿಲಾಷಾ 2

ಪೌಲಸ್ತ್ಯಾನುಜ ಮಾಠ ರಜ ರಕ್ಷ | ಶ್ರೀ ಗೋ-ಪಾಲನವನೆನೀಸುವದುಪೇಕ್ಷ ||ನೀಲೇಶ ತ(?)ಮಾಡದೆ ತಾ ರಕ್ಷ | ವಂದ್ಯಕಾಲಿಗೆರಗುವೆ ದುರ್ಜನ ಶಿಕ್ಷ3

ಮಧುಸಖ ಪಾಲಾನುಜ ಪಾದಾರವಿಂದ |ಮಧುಕರ ದಂಡ ಮೇಖಲ ಧಾರ ||ವಿದುರಾಗ್ರಜ ನಂದನ ಸಂಸಾರಾರಣ್ಯ |ಸುಧನಂಜಯ ವೃಕೋದರ ಸಮೀರ4

ಕುಟಿಲರಹಿತ ಋಜುಗಣಾಧೀಶ | ಶ್ರೀ ಧೂ-ರ್ಜಟಿವಂದ್ಯ ಭಕ್ತಿಯಿಂ ಪ್ರಾಣೇಶ ||ವಿಠಲನ್ನ ಭಜಿಸುತ್ತ ಸದ್ಭಾಷ್ಯವನ್ನು |ಪಠನೆ ಮಾಡಿಸೊ ದಯದಿಂದ ನಿಶಾ 5
********