Showing posts with label ಪಾಹಿ ಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ pranesha vittala. Show all posts
Showing posts with label ಪಾಹಿ ಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ pranesha vittala. Show all posts

Wednesday, 13 November 2019

ಪಾಹಿ ಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ ankita pranesha vittala

by ಪ್ರಾಣೇಶದಾಸರು
ಪಾಹಿಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ |ಮಹಾ ದುರಿತಾದ್ರಿ ಪ ವಿ ದೀನ ಸುರಧರಿಜೇ ಪ

ಶಿಷ್ಟಜನರ ಪಾಲಿಪಳೆ ದುಷ್ಟ ಜನ ದೂರಳೇ |ಸೃಷ್ಟಿಪತಿ ಸೇವೆಯೊಳಗಿಟ್ಟುದುರುಳ|ಬಟ್ಟೆಹಿಡಿಸದಲೆ ದಯವಿಟ್ಟು ಪಿಡಿವದು ಕೈಯ |ಕಷ್ಟ ನಾಶನ ಮಾಡೆ ಕೊಟ್ಟು ಸುಖ ಪೂಜ್ಯೆ 1

ಮದನಸತಿಕೋಟ ಲಾವಣ್ಯೆ ಗುಣಸಂಪನ್ನೆ |ಸುದತೀ ವೃಂದ ಶಿರೋಮಣಿ ಕರುಣಾರ್ಣವೆ ||ಮಧು ಜಿತ್ಪ್ರಿಯನ ರಾಣಿ, ವಾಣೀ ವೀಣಾಪಾಣಿ |ಹೃದಯದೊಳು ಕಮಲನಾಭನ ನಿರುತ ತೋರೇ 2

ಈಶಾದಿ ಸುಮನಸಾರ್ಚಿತಪಾದಸರಸೀರುಹೆ |ಲೇಶೀತರಾನಂದೆ ಸುಗುಣೆ ಶ್ರೀ ಪ್ರಾ-ಣೇಶ ವಿಠಲನ ಕೊಂಡಾಡುವರೊಳಗೆ ಸ್ನೇಹ |ಹ್ರಾಸವಾಗದೆ ಈಯೆ ಇಭರಾಜ ಗಮನೆ 3
*******