..
ಸರ್ವೇಶ ಹರಿ ನೀನು ಸರ್ವಾತ್ಮ ಶೌರಿ ಪ
ಸರ್ವಮಂಗಳಮಯನೆ ವಿಧಿತಾತ ಮುದವೀತೊ ಅ.ಪ.
ಉದ್ಧವನ ಗುರುವರ್ಯ ನಿರ್ದೋಷ ಗುಣವನಧಿ
ನಿದ್ದೆ ಮಾಡುವಗೊಲಿದು ಮುಕ್ತಿ ಇತ್ತೆ
ಹದ್ದುಮೀರಿ ಭವದಿ ಬಿದ್ದು ಮೊರೆ ಇಡುತಿಹೆನೊ
ಹೃದ್ಧಾಮದಲಿ ನಿನ್ನ ದರುಶನವ ನೀಡೆಯ್ಯ 1
ಮನದಲ್ಲಿ ಮಹಪೂಜೆಕೊಳ್ಳಯ್ಯ ಎನ್ನಿಂದ
ಪ್ರಣೀತಪಾಲಕ ಕೃಷ್ಣಪೂರ್ಣ ಪುರುಷ
ತೃಣಮೊದಲು ಬ್ರಹ್ಮಾಂಡ ಸರ್ವರಲಿ ಸ್ವಾತಂತ್ರ್ಯ
ಅನಿಲಾತ್ಮ ಆನಂದ ಖಣಿ ಕರುಣ ಮಾಡಯ್ಯ 2
ಕೆಸರು ಕಲ್ಕಿದe್ಞÁನಕಳವಡುವುದೇ ನಿನ್ನ
ಅಸಮ ಮಂಗಳ ಸುಗುಣ ಶ್ರುತಿ ವಿನುತನೆ
ದಶಮತಿಯ ಮನದೈವ ನೀ ಕೂತು ಮನದಲ್ಲಿ
ವಿಶದ ತಿಳಿಮತಿಯಿತ್ತು ವೈಭವವ ತೋರೆನಗೆ 3
ಜೀವಜಡರಲಿ ಪೊಕ್ಕಾಡುವೆ ಬಹುಲೀಲೆ
ಭಾವಸೂತ್ರದಿ ನಮ್ಮ ಕಟ್ಟಿ ಕುಣಿಸಿ
ಈ ವಿಧವ ಬಲ್ಲವರ ಮೇಲಾಗಿ ಪಾಲಿಸುವಿ
ತಾವೀಶರೆಂಬುವರು ಮುಳುಗುವರು ದುಃಖದಲಿ 4
ದುಷ್ಟಜನ ಸಹವಾಸ ಅಷ್ಟತತ್ವಗಳಲ್ಲಿ
ವೃಷ್ಣೀಶ ಬಿಡಿಸಯ್ಯ ಬಂಧ ಕಡಿದು
ಇಷ್ಟಾನಿಷ್ಟ ಜೀವರಲಿ ನಿಂತು ನಟಿಸುವ
ಗುಟ್ಟುತೋರಿ ಜಯೇಶವಿಠಲನೆ ಕೃಪೆಮಾಡು 5
***