Showing posts with label ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ krishnavittala. Show all posts
Showing posts with label ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ krishnavittala. Show all posts

Monday, 2 August 2021

ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ ankita krishnavittala

ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ ಪ


ಈಶ ಹೊರತು ಮಿಕ್ಕ ಜನರು ದಾಸರೇ ಸರಿ ಅ.ಪ.


ವೇದವ್ಯಾಸದೇವ ದೇವ ಸರ್ವರಿಗೆ ಈಶ ಕಾಣಿರೋ

ಮೋದಮುನಿಯು ಆತನಿಗೆ ಮುಖ್ಯದಾಸ ಶಾಸ್ತ್ರಸಿದ್ದವೋ

ಎಂದಮೇಲೆ ನೀನು ಯಾರು ಸಾಕ್ಷಿಕೇಳಿ ಬೇಗ ನುಡಿಯಲೋ

ಛಂದ ಭಜಿಸಿ e್ಞÁನ ಘಳಿಸಿ ದಾಸನೆಂದು ಹರಿಯ ಭಜಿಸೆಲೋ 1


ಧರ್ಮಶಾಸ್ತ್ರ ಮರ್ಮಬಿಟ್ಟು ಓದಿ ಓದಿ ಏನು ಫಲವೊ

ನಿರ್ಮಲಾತ್ಮ ನಿತ್ಯ ತೃಪ್ತ ನಿರ್ಜರೇಶ ನೊಲಿಮೆ ಮುಖ್ಯವೋ

ಕಮಲೆಯರಸ ಕಲ್ಪವೃಕ್ಷ ಹೃಸ್ಥದೊರೆಯ ಕಾಣಬೇಕೆಲೋ

ಕರ್ಮಬಿಡದೆ ಆಶೆತೊರೆದು ಕರ್ಮಪತಿಯ ಶರಣು ಪೊಗೆಲೋ 2


ವೇದಶಾಸ್ತ್ರ ಸ್ಮøತಿಗಳಲ್ಲಿ ಪೇಳಿರುವ ತತ್ವಗಳನ್ನು

ಮೋದಮನಿಯ ಮತವ ಬಿಡದೆ

ನಡತೆಯಿಂದ ನಡಿಸಿ ನಡಿಸುತ

ಇಂದಿರೇಶನ ದಾಸಜನರು ಪದಗಳಿಂದ ಪಾಡಿ ಪಾಡುವ

ಖೇದವಳಿದು ಸಾಧು ಜನಕೆ ನಂದ ಸೂರೆಗೈದು ನಲಿವರೋ 3


ವೇಷದಿಂದ ಭಾಷೆಯಿಂದ ಶ್ರೀಶನೊಲಿಮೆ ಕಾಣಲಾಗದೋ

ದಾಸನೆಂದು ದೈನ್ಯದಿಂದ ದ್ವೇಷ ತ್ಯಜಿಸಿ ಕೂಗಬೇಕೆಲೋ

ವಿಷಯವಳಿದು ಮಮತೆ ಬಿಟ್ಟು ಗೆಜ್ಜೆಕಟ್ಟಿ

ಕುಣಿದು ಕುಣಿಯಲೊ 4


ಶಕ್ತಿಜರಿದ್ವಿರಕ್ತಿಬೇಡಿ ಭಕ್ತಿಯಿಂದ ಭಜಿಸಿ ಭಜಿಸೆಲೊ

ಶಕ್ತ ವಿಜಯಸೂತ ಶ್ರೀ ವಾಯುಹೃಸ್ಥ “ಕೃಷ್ಣವಿಠಲ”

ಯುಕ್ತಿಯಿಂದ ಬಂಧಬಿಡಸಿ ನಿತ್ಯಸುಖವ ನಿತ್ತು ಕಾಯ್ವನೊ

ಭಕ್ತಿಯಿಂದ ಶಕ್ಯನಾದ e್ಞÁನ ಘಳಿಸಿ ಕೊಲ್ಲು ಸಂಶಯ 5

****