Showing posts with label ಹಯವದನನ ಪಾದದ್ವಯವ ನೆನೆಯದವ ಜಯಿಸುವನೆಂತೋ hayavadana HAYAVADANANA PAADADWAYAVA NENEYADAVA JAYISUVNENTO. Show all posts
Showing posts with label ಹಯವದನನ ಪಾದದ್ವಯವ ನೆನೆಯದವ ಜಯಿಸುವನೆಂತೋ hayavadana HAYAVADANANA PAADADWAYAVA NENEYADAVA JAYISUVNENTO. Show all posts

Saturday, 6 November 2021

ಹಯವದನನ ಪಾದದ್ವಯವ ನೆನೆಯದವ ಜಯಿಸುವನೆಂತೋ ankita hayavadana HAYAVADANANA PAADADWAYAVA NENEYADAVA JAYISUVNENTO

ಹಯವದನನ ಪಾದದ್ವಯವ ನೆನೆಯದವ

ಜಯಿಸುವನೆಂತೋ ಸಂಸ್ಮøತಿ ಫಲವ ಪ.

ಕಾಗೆಯಂತಾದರು ಬಿದ್ದರು ಎದ್ದರು

ಯೋಗದೊಳಿದ್ದರು ಬಿದ್ದವನೆ

ಆಗಮವನು ತಂದು ಅಜನಿಗೆ ಬೋಧಿಸಿ-

ದಾ ಗುಣನಿಧಿಯನರ್ಚಿಸದವನು 1

ಬೂದಿಗೆ ವಾದಿಸಿ ಮಣ್ಣಮೇಲುಣ್ಣಲು

ಸಾಧಿಪುದೇನವ ಶ್ರವ ಶ್ರಾವಕ ವ್ರತವ

ಬೂದಿಯ ಮಾಡಿದ ಮಣ್ಣಿನ ಗಂಡನ

ಹಾದಿಯನೊಲ್ಲದ ಹಂಚುನರ2

ಉಟ್ಟದ ಬಿಟ್ಟು ತನ್ನಟ್ಟಲು ಬಟ್ಟೆಯ

ಕಷ್ಟ ತಾ ಬಟ್ಟು ಕಂಗೆಟ್ಟನೈಸೆ

ಸೃಷ್ಟಿಸಿ ಸಲಹುವ ಹಯವದನನ ಪರಿ-

ತುಷ್ಟಿಗೆ ಪುಟ್ಟದ ದುಷ್ಟಪಶು3

***