Showing posts with label ಅವನೇ ಧನ್ಯ ನೋಡಿ ಅವನ ದರುಶನ ಮಾಡಿ gurumahipati AVANEVE DHANYA NODI AVANA DARUSHANA MAADI. Show all posts
Showing posts with label ಅವನೇ ಧನ್ಯ ನೋಡಿ ಅವನ ದರುಶನ ಮಾಡಿ gurumahipati AVANEVE DHANYA NODI AVANA DARUSHANA MAADI. Show all posts

Wednesday, 1 December 2021

ಅವನೇ ಧನ್ಯ ನೋಡಿ ಅವನ ದರುಶನ ಮಾಡಿ ankita gurumahipati AVANEVE DHANYA NODI AVANA DARUSHANA MAADI

ಕಾಖಂಡಕಿ ಶ್ರೀ ಕೃಷ್ಣದಾಸರು

ಅವನೆವೆ ಧನ್ಯ ನೋಡಿ ಅವನ ದರುಶನ ಮಾಡಿ ಪ. 

ಹರಿಧ್ಯಾನ ಹೃದಯದಲ್ಲಿ | ಹರಿನಾಮ ಜಿವ್ಹದಲಿ | ಹರಿಕಥೆ ಶ್ರವಣದಲ್ಲಿ| ಹರಿಯಾ ಸೇವೆ ಅಂಗದಲ್ಲಿ1

 ಹರಿಭಕ್ತಿಯೊಳು ಕೂಡಿ | ಹರಿ ಕೀರ್ತನೆಯ ಮಾಡಿ | ಹರಿ ಪ್ರೇಮ ತುಳಕಾಡಿ | ಹೊರಳುವ ನಲಿದಾಡಿ 2 

ತಂದೆ ಮಹಿಪತಿ ದಯಾ ದಿಂದ ಪಡೆದು ವಿಜಯಾ ಹೊಂದುವ ತಿಳಿದು ನೆಲಿಯಾ ಛಂದವಾದಾ ಪುಣ್ಯಕಾಯಾ 3

***