Showing posts with label ತುಂಗೆ ಬಂದಳು ದೇವೋತ್ತುಂಗ ವರಹನಾ vijaya vittala. Show all posts
Showing posts with label ತುಂಗೆ ಬಂದಳು ದೇವೋತ್ತುಂಗ ವರಹನಾ vijaya vittala. Show all posts

Wednesday, 16 October 2019

ತುಂಗೆ ಬಂದಳು ದೇವೋತ್ತುಂಗ ವರಹನಾ ankita vijaya vittala

ತುಂಗೆ ಬಂದಳು ದೇವೋತ್ತುಂಗ ವರಹನಾ
ಮುಂಗೋರಿಯಲ್ಲಿ ಪುಟ್ಟಿ ಭಕ್ತ ನಿಕರನಾ
ಹಿಂಗದೆ ಪೊರೆದು ಸುಖಂಗಳನೀವು ತಾ
ಮಂಗಳಾಂಗೆ ಮಾತಂಗೆ ಸುಗಮನೆ ಪ

ಕಾಳ ಪನ್ನಗವೇಣಿ ಕೋಕಿಲವಾಣಿ
ಫಾಲ ಕಸ್ತುರಿ ಜಾಣೆ ಪಲ್ಲವಪಾಣಿ
ವಾಲೆ ಮೂಗುತಿ ಅಣಿ ಮುತ್ತು ಕಠಾಣಿ
ತೋಳು ಮಂದಾರಮಣಿ ಅರಿಗುಣಶ್ರೇಣಿ
ಮೌಳಿಯಾ ಮೇಲಿನ ಜಾಳಿಗೆ ಸೂಸುಕಾ
ವಾಲಲು ಕದಿಪಿನ ನೀಲಗೂದಲು ಭ್ರಮ
ರಾಳಿಗಳಂತಿರೆ ಬಾಲ ಸುಧಾಕರ ಪೋಲುವ ವದನೇ1

ಕುಡುತೆಗಂಗಳ ನೀರೆ ಕಂಬುಕಂಧರೆ
ಕಡಗ ಕಂಕಣದ್ವಾರೆ ಕೈಯ ಶೃಂಗಾರೇ
ಜಡಿವ ಪದಕಹಾರೆ ಕಂಚಕಸೀರೆ
ಮುಡಿದ ಪುಷ್ಪಂಗಳು ಮರೆ ಕುಚಗಳು ಅದರೆ
ಬಡನಡುವಿನ ಕಡು ಉಡುವಿನ ಕಿಂಕಣಿ
ಒಡನುಡಿಸುವ ಗೆಜ್ಜೆ ಕಾಲಂದಿಗೆ ಪೆಂಡೇ ಅ
ಡಿಗಡಿಗೊಪ್ಪಲು ಕಡಲನ ಮಡದಿ 2

ತೀಡಿದ ಪರಿಮಳ ಗಂಧದ ಭೋಗಿ
ಕೂಡಲಿಪುರದಲಿ ಭದ್ರಿವಂದಾಗಿ
ಕೂಡಿ ಸೂಸಿದಳಂದು ಮುಂದಕ್ಕೆ ಸಾಗಿ
ಆಡುತ ಪಾಡುತ ಬಲು ಲೇಸಾಗಿ
ಬೇಡಿದ ಜನರಿಗೆ ಈಡಿಲ್ಲದ ವರವ
ನೀಡುತ ನಿರುತರ ಮಾಡುತ ದಯವನು
ನೋಡುತ ತಡವಿಲ್ಲದಲೆ 3

ಶೃಂಗಾರ ಮಾರ್ತಾಂಡೆ ಹರಿಹರ ಮಾತಾ
ಅಂಗಾಧಿ ಪರ್ವತ ಪಂಚ ಪ್ರಖ್ಯಾತ
ಹಿಂಗದೆ ಬಲಗೊಂಡು ಕೊಡ್ಲೀಗೆ ಬರುತ
ಸಂಗೀತ ಗಾಯನದಿಂದ ವಾಲಗಗೊಳುತ
ಸಂಗಮೆಯಾಗಿ ತಂಗಿಯ ಬೆರತೀಗ
ಮಂಗಳ ಕ್ರೀಡೆಯಲ್ಲಿ ಪ್ರವೇಶಿಸಿ
ಗಂಗೆ ಎನಿಸಿಳ್ಯಮನನಾದೇಳಗೆ 4

ಲೋಕದೊಳಗೆ ಪ್ರತಿರಹಿತ ಪೆಸರಾದ
ಚೀಕನ ಬರವಿಯ ಅಶ್ವಥಮರದ
ನೃಕಂಠೀರವನ ಪಾದದಿ ವ್ಯಾಧಿಷ್ಟರಾದ
ಸೋಕಿ ಮೈಮರೆದಂಥ ನಮಿತರು ಕರದಾ
ಪಾಕ ಪದಾರ್ಥಕೆ ಒಲಿದೊಲಿದಾಡುತ
ಶ್ರೀಕರ ವಿಜಯವಿಠ್ಠಲಗೆರಗುತ
ನಾಕಕನ್ನಿಕೆಯಂತೆ ಹೊಳೆದಳುಯಿಂದು5
***********