Showing posts with label ಇಂದಿರಾನಂದುದಧಿವರ್ಧನೆಂದು jayesha vittala. Show all posts
Showing posts with label ಇಂದಿರಾನಂದುದಧಿವರ್ಧನೆಂದು jayesha vittala. Show all posts

Friday, 27 December 2019

ಇಂದಿರಾನಂದುದಧಿವರ್ಧನೆಂದು ankita jayesha vittala

ಶ್ರೀ ಜಯೇಶವಿಠಲರ ಕೃತಿ 
ರಾಗ ಅಭೋಗಿ            ಆದಿತಾಳ 

ಇಂದಿರಾನಂದುದಧಿವರ್ಧನೆಂದು || ಪ ||
ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು || ಅ.ಪ ||

ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ
ನಾನಾ ಯಾತನೆ ಭಾವ ಬಲೆಯ ಕಟ್ಟಿ
ಹೀನಗೋಜಿಗೆ ಸಿಕ್ಕಿ ಬಲುನೊಂದೆ ಗೋವಿಂದ
ನೀನು ನಿನ್ನದು ಎಂಬೋ ಅಮೃತಜ್ಞಾನದಿ ನಿಲಿಸು || 1 ||

ದರ್ವಿಯಂದದಿ ನಾನು , ನೀ ಸರ್ವ ಸ್ವಾತಂತ್ರ
ನಿರ್ವಾಹ ನಿನ್ನಿಂದ ಸರ್ವ ಜಗಕೆ
ದೂರ್ವಿ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ -
ಗರೆವಂಥ ಗುಣನಿಧಿಯೆ ಸರ್ವಾತ್ಮ ಹೊರೆ ಹೊರೆಯೊ || 2 ||

ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ
ಎನ್ನಲ್ಲಿ ಎಂದೆಂದು ವೇದವೇದ್ಯ
ನಿನ್ನ ದರುಶನ ಫಲಕೆ ನಿನ್ನವರ ಮಹಕರುಣ
ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ || 3 ||

ಮನೋವಿಕಾರಗಳೆಂಬ ದುಃಖಾರ್ಣವದಲಿ ಬಿದ್ದು
ಅನುಮಾನಮುನಿದೈವ ನಿನ್ನ ಅಮೃತ
ತನುಧ್ಯಾನ ಮನಕ್ಹಿಡಿಯದೇನುಗತಿ ಯದುವರ್ಯ
ತೃಣಕೆ ಕೈವಲ್ಯವೀವ ತ್ರ್ಯಕ್ಷೇಶಮನ ಪೊಂದು || 4 ||

ಜ್ಞಾನ ಮನ ಬಿಡದಿರು ದೀನ ಬಾಂಧವ ಕೃಷ್ಣ
ಈ ನಿನ್ನ ಮಾಯವನು ತೆಗೆಯೋ ಹರಿಯೇ ॥
ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ
ಪ್ರಾಣಧಾರಕ ಶುಕನ ಆನಂದನಿಧಿ ಪಾಹಿ || 5 ||
*****

ಇಂದಿರಾನಂದ ಉದಧಿವರ್ಧನನೆಂದು ಪ

ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು ಅ.ಪ

ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ
ನಾನಾ ಯಾತನೆ ಭಾವ ಬಲೆಯ ಕಟ್ಟಿ
ಹೀನಗೋಜಿಲಿ ಸಿಕ್ಕಿ ಬಲುನೊಂದೆ ಗೋವಿಂದ
ನೀನು ನಿನ್ನದು ಎಂಬ ಅಮೃತಗಾನದಿ ನಿಲಿಸು 1

ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ
ನಿರ್ವಾಹ ನಿನ್ನಿಂದ ಸರ್ವ ಜಗಕೆ
ದೂರ್ವ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ
ತೋರ್ವಂಥ ಗುಣನಿಧಿ ಸರ್ವಾತ್ಮ ಹೊರೆ ಹೊರೆಯೊ 2

ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ
ಎನ್ನಲಿ ಎಂದೆಂದು ವೇದವೇದ್ಯ
ನಿನ್ನ ದರುಶನ ಫಲಕೆ ನಿನ್ನ ಮಹಕರುಣ
ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ 3

ಮನೋವಿಕಾರಗಳೆಂಬ ದುಃಖಾರ್ಣದಿ ಬಿದ್ದು
ಅನುಮಾನ ಮಾಡಿದೆನೊ ನಿನ್ನ ಅಮೃತ
ತನುಧ್ಯಾನ ಮನಕಿಡಿಯದೇನುಗತಿ ಯದುವರ್ಯ
ತೃಣಕೆ ಕೈವಲ್ಲೀವ ತ್ರ್ಯಧೀಶಮನಪೊಂದು 4

ಜ್ಞಾನಮನ ಬಿಡದಿರು ದೀನ ಬಾಂಧವ ಕೃಷ್ಣ
ಇನ್ನು ಮಾಯವನು ತೆಗೆದೆನ್ನ ಬೆರೆಯೊ
ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ
ಪ್ರಾಣಾಧಾರಕ ಶುಕನ ಆನಂದನಿಧಿ ಪಾಹಿ 5
*****