Showing posts with label ಅಭಯ ಗಿರಿವಾಸ ಶ್ರೀನಿವಾಸನು ನಮಗೆ vijaya vittala ABHAYA GIRIVAASA SRINIVASANU NAMAGE. Show all posts
Showing posts with label ಅಭಯ ಗಿರಿವಾಸ ಶ್ರೀನಿವಾಸನು ನಮಗೆ vijaya vittala ABHAYA GIRIVAASA SRINIVASANU NAMAGE. Show all posts

Thursday, 17 October 2019

ಅಭಯ ಗಿರಿವಾಸ ಶ್ರೀನಿವಾಸನು ನಮಗೆ ankita vijaya vittala ABHAYA GIRIVAASA SRINIVASANU NAMAGE

ಅಭಯ ಗಿರಿಯವಾಸ ಶ್ರೀನಿವಾಸನು ನಮಗೆ |
ಶುಭವೀವ ನಿರುತ ಮಂದಹಾಸನೊ ಪ

ಧೇನಿಪರ ಮನಕೆ ಚಿಂತಾಮಣಿಯೋ ಸ್ವಾಮಿ |
ನೀನೆ ಗತಿಯೆಂಬರಿಗೆ ಹೊಣೆಯೋ
ಜ್ಞಾನಸಮಯ ಸಂದಣಿಯೊ ಪುಣ್ಯ
ಕಾನನ ನಿವಾಸ ಸುರಖಣಿಯೊ 1

ವಜ್ರ ಪಂಜರನೋ ದುಷ್ಟ
ದುರುಳ ದೈತ್ಯರಿಗೆ ಝರ್ಝರನೊ
ದುರಿತ ಕದಳಿಗೆ ಕುಂಜರನೊ ಸ್ವಾಮಿ
ಉರಗತಲ್ಪನಾದ ಸಿರಿವರನೊ 2

ಪರಮೇಷ್ಟಿ ಶಿವರೊಳಗಿಪ್ಪನೋ ಇಂದು
ಮರುತನ ಪೆಗಲೇರಿ ಬಪ್ಪನೊ
ಶರಣರಿಗೊರವೀಯೆ ತಪ್ಪನೋ ನಮ್ಮ
ಸಿರಿ ವಿಜಯವಿಠ್ಠಲ ತಿಮ್ಮಪ್ಪನೊ 3
****

just scroll down for other devaranama