..
kruti by ವೀರನಾರಾಯಣ Veeranarayana
ಬಿಡಬೇಡೋ ರಂಗಾ ಬಿಡಬೇಡೋಕಡುಮೋಹಕದ ಕೊಳಲನೂದುವದನು ಪ
ಬಿಡುವೆಯಾದರೆ ಮನಕಡು ತವಕದೊಳುತಡವರಿಸುವುದೊಲೆಡೆಯನು ನೋಡೋ ಅ.ಪ.
ಕಿವಿಯೊಳು ನಾದವು ಅಮೃತವ ಸುರಿಯೆಸವಿಯುಣ್ಣುತಲೀ ಮನ ಮೈಮುರಿಯೆತಳಮಳಿಸುವದು ನಡುವೆ ನಿನಗಿದು ಸರಿಯೆಹೊರಗಿನ ಭಾವದ ಪವಣವನರಿಯೆ 1
ಕೊಳಲನೂದುತಿರಲಾನಂದೊಳುಮುಳುಗಿರಲಾಗ ಕಣ್ಣಮುಂದಸುಳಿದಾಡುವ ನಿನ್ನ ಮೂರುತಿ ಚಂದತೊಲಗಿ ಪೋಗುವದೊ ಗೋಪಿಯ ಕಂದ 2
ಮಧುರವೋ ನಿನ್ನ ಕೊಳಲು ಗಾಯನಇದರೊಳಿಲ್ಲವೊ ಲವ ಅನುಮಾನಮೊದಲು ಮುರಳಿಯ ಹಿಡಿಹಿಡಿ ಜಾಣಗದುಗಿನ ವೀರನಾರಾಯಣ 3
***