ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಸ್ವರೂಪದರಹು ಗುರುತದೋರುವ ಕುರುಹು ಗುರುವ್ಹೆ ಇರುವ್ಹಾಂಗ ದೋರುದೆ ಪರಾತ್ಪರವು ಪ
ಅರವಿನಾಗ್ರದಲಿಹ ಕುರುಹುದೋರುವ ಖೂನ ಗುರುತವಾಗುದೆ ಗುರುಕೃಪೆಯ ಜ್ಞಾನ ಮರವಿನ ಮೂಲವನು ಮರೆದು ಬಿಡುವಸ್ಥಾನ ಅರವೆ ಅರವಾಗಿದೋರುವ ನಿಜ ನಿಧಾನ 1
ಅರಹು ಮರವನೆ ದಾಟಿ ಮೀರಿ ದೋರುವ ಕುರುಹು ಅರಿತು ಕೊಂಬುದೆ ತತ್ವದರವ್ಹಿನರಹು ತಿರುಹು ಮುರುವ್ಹಿನ ಅರುಹದೋರಿ ಕೊಡುವುದೇ ಸ್ಥಿರವು ಬೆರೆದು ಕೊಡುವದೆ ಗುರುಙÁ್ಞÀ ನಾನಂದ ಕುರುಹು 2
ಕರೆದು ಕರುಣಿಸಿ ದಯವು ಬೀರಿದನುಭವ ಸುಖವು ಗುರುಭಾನುಕೋಟಿ ಪ್ರಕಾಶ ಎನಗೆ ಅರವೆ ಅರಿವ್ಹಾಗಿ ತೋರಿತು ಮನೋನ್ಮನವಾಗಿ ತರಳ ಮಹಿಪತಿಗೆ ಘನ ಬೆಳಗೆ ಬೆಳಕು 3
***