Wednesday, 1 September 2021

ಗುರುಸ್ವರೂಪದರಹು ಗುರುತದೋರುವ ಕುರುಹು ಗುರುವ್ಹೆ ಇರು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಗುರು ಸ್ವರೂಪದರಹು ಗುರುತದೋರುವ ಕುರುಹು ಗುರುವ್ಹೆ ಇರುವ್ಹಾಂಗ ದೋರುದೆ ಪರಾತ್ಪರವು ಪ 


ಅರವಿನಾಗ್ರದಲಿಹ ಕುರುಹುದೋರುವ ಖೂನ ಗುರುತವಾಗುದೆ ಗುರುಕೃಪೆಯ ಜ್ಞಾನ ಮರವಿನ ಮೂಲವನು ಮರೆದು ಬಿಡುವಸ್ಥಾನ ಅರವೆ ಅರವಾಗಿದೋರುವ ನಿಜ ನಿಧಾನ 1 

ಅರಹು ಮರವನೆ ದಾಟಿ ಮೀರಿ ದೋರುವ ಕುರುಹು ಅರಿತು ಕೊಂಬುದೆ ತತ್ವದರವ್ಹಿನರಹು ತಿರುಹು ಮುರುವ್ಹಿನ ಅರುಹದೋರಿ ಕೊಡುವುದೇ ಸ್ಥಿರವು ಬೆರೆದು ಕೊಡುವದೆ ಗುರುಙÁ್ಞÀ ನಾನಂದ ಕುರುಹು 2 

ಕರೆದು ಕರುಣಿಸಿ ದಯವು ಬೀರಿದನುಭವ ಸುಖವು ಗುರುಭಾನುಕೋಟಿ ಪ್ರಕಾಶ ಎನಗೆ ಅರವೆ ಅರಿವ್ಹಾಗಿ ತೋರಿತು ಮನೋನ್ಮನವಾಗಿ ತರಳ ಮಹಿಪತಿಗೆ ಘನ ಬೆಳಗೆ ಬೆಳಕು 3

***


No comments:

Post a Comment