ಕಾಖಂಡಕಿ ಶ್ರೀ ಕೃಷ್ಣದಾಸರು
ಭಕುತಿಯಲಿ ಭಜಿಸಿ ಹರಿಯ ಸುಖಿಸಬಾರದೇ ಪ
ಪ್ರಕಟದಿ ಸಜ್ಜನ ನಿಕಟದಿ ತಾಮಸ| ಶಕಟ ಮುರಿದ ಸುರ ಮುಕುಟ ಮಣಿಯಾ ಅ.ಪ ತರಣೀಯಾ ಕೋಟಿ ಪ್ರಕಾಶದಿ ಧರಣಿಯಾ ರಮಣನ ನಾಮ| ಕರಿ ಕಿರಿಯನೆ ಶಿರಿ| ಗರುಡಗರಿಯದೇ ಭರದಿ ತಾ ಬರುತದೆ ಶರಣರಾ ಹೊರೆದ 1
ಮರುವಿನ ಕತ್ತಲೆ ನೂಕುವ ಚರಣವ ಅರವಿನ ದೀಪವ ಹಚ್ಚಿ| ಕುರುವಿನಾ ಚಿನ್ಮಯ ನೊಡಲು ಗುರುವಿನಾ| ಚರಣವ ಪೂಜಿಸಿ ಕರುಣವ ಸಾಧಿಸಿ ತರುಣೋಪಾಯದ ಚರಣವ ಬಲಿಯೋ 2
ಮನವಧಾನದಿ ನಿಲಿಸಿ ತನುವನಾ ಸೇವೆಗರ್ಪಿಸಿ| ಘನವನು ಮಾಡುತಾ ಸುಜನರಾ ಅನುವನು ಕನಸಿಲೇ| ಘನ ಗುರು ಮಹಿಪತಿ-ಜನ ಪ್ರಭುವಿನ ಅನುದಿನದಲಿ ಪಾಡಿ3
***
No comments:
Post a Comment