ರಾಗ ಶಂಕರಾಭರಣ. ಅಟ ತಾಳ
ದಾರೆನೇಂದರೊ ರಂಗಯ್ಯ ನಿನ್ನ ದಾರೇನೆಂದರೊ ||ಪ||
ದಾರೇನೆಂದರು ಭೂಸುರ ಲೋಕದ ಕೃತ್ಯ
ತ್ರಿಜಗ ವಂದಿತ ಮುರಹರ ಮೋಹನ ನಿನ್ನ ||
ಸಕ್ಕರೆ ಚೀನಿಪಾಲು ಸವಿದ ತನುವಿನ
ಉಕ್ಕುವ ನೊರೆ ಹಾಲುಗಳ ಮುದ್ದು ರಂಗಯ್ಯ ನಿನ್ನ ||
ಕಿರುನಗೆಯಲಿ ಕಿರುಗೆಜ್ಜೆಯ ಮಾಗಾಯಿ ಒಪ್ಪೆ
ಕಿರುಗೆಜ್ಜೆ ಘುಲುಘುಲು ಎಂದು ಕುಣಿವ ನಿನ್ನ ||
ಸಕಲ ಭಾಗವತರು ಗತಿ ತಾಳದಿಂದ
ತಕ್ಕಿಟ ತಕ್ಕಿಟ ತಧಿಮಿಕೆಂದು ಕುಣಿವ ನಿನ್ನ ||
ವೃಂದಾವನದಿ ಗೋವಿಂದ ಗೋಪಿಯ ಕಂದ
ಮಂದರೋದ್ಧರ ಮುದ್ದು ಮುಖದ ಚೆಲುವನೆಂದು ನಿನ್ನ ||
ಥಳಥಳಿಸುವ ತಿಳಿಗಣ್ಣಿನ ಸೊಬಗಿನ
ಎಳೆನಗೆ ಸುಳಿನಗೆಯ ಮುದ್ದಿಕ್ಕಿ ನಿನ್ನ ||
ಅಂದು ಅಜಾಮಿಳನು ನಾರಗ ಎಂದು ಕರೆಯಲಾಗಿ ವೈ-
ಕುಂಠಕ್ಕೆ ಒಯ್ದೆಯೋ ದ್ವಾರಕಾ ಕೃಪಾಳು ನಿನ್ನ ||
ತರಳನ ಮಾತ ಕೇಳಿ ಸ್ತಂಭದಿಂದ ಉದ್ಭವಿಸಿದೆ
ಹಿರಣ್ಯಕಶ್ಯಪನ ಬಾಧೆಯ ಬಿಡಿಸಿದೆಯೋ ದೇವ ||
ಕರುಣಾಕರ ನಮ್ಮ ಪುರಂದರವಿಠಲ ಕರೆದು ಭ-
ಕ್ತರಿಗೆಲ್ಲ ವರವು ಕೊಡುವ ಸ್ವಾಮಿ ನಿನ್ನ ||
***
ದಾರೆನೇಂದರೊ ರಂಗಯ್ಯ ನಿನ್ನ ದಾರೇನೆಂದರೊ ||ಪ||
ದಾರೇನೆಂದರು ಭೂಸುರ ಲೋಕದ ಕೃತ್ಯ
ತ್ರಿಜಗ ವಂದಿತ ಮುರಹರ ಮೋಹನ ನಿನ್ನ ||
ಸಕ್ಕರೆ ಚೀನಿಪಾಲು ಸವಿದ ತನುವಿನ
ಉಕ್ಕುವ ನೊರೆ ಹಾಲುಗಳ ಮುದ್ದು ರಂಗಯ್ಯ ನಿನ್ನ ||
ಕಿರುನಗೆಯಲಿ ಕಿರುಗೆಜ್ಜೆಯ ಮಾಗಾಯಿ ಒಪ್ಪೆ
ಕಿರುಗೆಜ್ಜೆ ಘುಲುಘುಲು ಎಂದು ಕುಣಿವ ನಿನ್ನ ||
ಸಕಲ ಭಾಗವತರು ಗತಿ ತಾಳದಿಂದ
ತಕ್ಕಿಟ ತಕ್ಕಿಟ ತಧಿಮಿಕೆಂದು ಕುಣಿವ ನಿನ್ನ ||
ವೃಂದಾವನದಿ ಗೋವಿಂದ ಗೋಪಿಯ ಕಂದ
ಮಂದರೋದ್ಧರ ಮುದ್ದು ಮುಖದ ಚೆಲುವನೆಂದು ನಿನ್ನ ||
ಥಳಥಳಿಸುವ ತಿಳಿಗಣ್ಣಿನ ಸೊಬಗಿನ
ಎಳೆನಗೆ ಸುಳಿನಗೆಯ ಮುದ್ದಿಕ್ಕಿ ನಿನ್ನ ||
ಅಂದು ಅಜಾಮಿಳನು ನಾರಗ ಎಂದು ಕರೆಯಲಾಗಿ ವೈ-
ಕುಂಠಕ್ಕೆ ಒಯ್ದೆಯೋ ದ್ವಾರಕಾ ಕೃಪಾಳು ನಿನ್ನ ||
ತರಳನ ಮಾತ ಕೇಳಿ ಸ್ತಂಭದಿಂದ ಉದ್ಭವಿಸಿದೆ
ಹಿರಣ್ಯಕಶ್ಯಪನ ಬಾಧೆಯ ಬಿಡಿಸಿದೆಯೋ ದೇವ ||
ಕರುಣಾಕರ ನಮ್ಮ ಪುರಂದರವಿಠಲ ಕರೆದು ಭ-
ಕ್ತರಿಗೆಲ್ಲ ವರವು ಕೊಡುವ ಸ್ವಾಮಿ ನಿನ್ನ ||
***
pallavi
dArenedaro rangayya ninna dArenendaro
caraNam 1
dArenendaru bhUsura lOkada krtya trijaga vandita murahara mOhana ninna
caraNam 2
sakkare cInipAlu savita tanuvina ukkuva nore hAlugaLa muddu rangayya ninna
caraNam 3
kiru nageyali kiru gejjeya mAgAyi oppe kiru gejje ghulu ghulu endu kuNiva ninna
caraNam 4
sakala bhAgavataru gati tALadinda takkiTa takkiTa tadhimikendu kuNiva ninna
caraNam 5
vrndAvanadi gOvinda gOpiya kanda mandarOddhara muddu mukhada celuvanendu ninna
caraNam 6
thaLa thaLisuva tiLi gaNNina sobagina eLe nage suLi nageya muddikki ninna
caraNam 7
andu ajAmiLanu nAraga endu kareyalAgi vaikuNThakke oideyO dvArakA krpALu ninna
caraNam 8
taraLana mAta kELi sthambadinda udbhaviside hiraNyakashyapana bAdheya biDisideyO dEva
caraNam 9
karuNAkara namma purandara viTTala karedu bhaktarigella varavu koDuva svAmi ninna
***