Showing posts with label ಮನಸಿಗೆ ಬಂತು ತಾ ಘನ ಗುರುಮೂರ್ತಿ ಶ್ರೀಪಾದ mahipati. Show all posts
Showing posts with label ಮನಸಿಗೆ ಬಂತು ತಾ ಘನ ಗುರುಮೂರ್ತಿ ಶ್ರೀಪಾದ mahipati. Show all posts

Wednesday, 1 September 2021

ಮನಸಿಗೆ ಬಂತು ತಾ ಘನ ಗುರುಮೂರ್ತಿ ಶ್ರೀಪಾದ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಮನಸಿಗೆ ಬಂತು ತಾ ಘನ ಗುರುಮೂರ್ತಿ ಶ್ರೀಪಾದ ಪ  

ಕನಸಿಲೆ ಕಾಣದ ಕುರುಹು ಮನಸಿಗೆ ಬಂತೆನ್ನೊಳು ತಾ ಪೂರ್ಣ ಏನೆಂದ್ಹೇಳಲಿ ಸೂಕ್ಷ್ಮ ಅನುಭವದ ಖೂನ 1 

ಮನಸಿಗೆ ಬಾರದೆ ಹೋಗಿ ಜನಸಿತು ನಾನಾ ಯೋನಿಲೆನ್ನ ಏನೋ ಎಂತೋ ತಿಳಿಯದು ಅನಂದ ಘನ 2 

ಮನಸಿಗೆ ಬಂದ ತಾ ವಸ್ತು ಜನವನದೊಳು ತಾ ತುಂ ಬ್ಯಾದೆ ಅನುಕೂಲವಾಯಿತು ಎನಗೆ ದೀನ ಮಹಿಪತಿಗೆ 3

***