ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಹುದೆ ಬ್ರಹ್ಮಾನಂದದ ಸುಖವು ಪ
ಘನಗುಡುವದೆ ನೆನದಾಗಲಿ ಖೂನದೋರುದು ಆವಾಗಲಿ ಜನರಂಜನಿ ಶೀಲೆ 1
ತನುವುತನ್ನಲ್ಲಿರಕ್ಕೆ ಪೂರ್ಣ ಘನಗುರುವಿಗೆ ತಾ ಅರ್ಪಿಸಿತೇನ ಜನಮಾಡುವುದು ಈ ಸಾಧನ ಅನುಮಾನದ ಖೂನ 2
ಅನುದಿನ ಹೊರಳ ಗುರು ಪಾದದಲಿ ನೀನೆ ಗತಿ ಎಂದೆನುತಲಿ ನೆನೆವನು ಬಾಯಲಿ 3
ಗುರುಗುಣಕೆ ಮೂರ್ಹಾದ್ಹೊಚ್ಚಿರಲಿ ತೋರಬಲ್ಲುದೆ ಸುಙÁ್ಞ ನದ ಕೀಲಿ ಬರಿಯ ಮಾತಿನ ಭಕ್ತಿಲಿ ಅರವಾಗುವದೆ ನೆಲಿ 4
ಠಕ್ಕ ತನಕೆ ಸಿಲ್ಕುದೆ ಸದ್ವಸ್ತು ಲೆಕ್ಕವಿಲ್ಲದೆ ಅಮೋಲಿಕಮಾತಿಲ್ಯಾಕೋ ಮಹಿಪತಿ ಭಾವವಿತ್ತು ಅಕ್ಕಿಸಿದೋ ಬೆರ್ತು 5
***