ರಾಗ : ಹಂಸನಾದ ಖಂಡಛಾಪು
ಶ್ರೀ ಮೋಹನದಾಸರ ಕೃತಿ
ಭಿಕ್ಷವ್ಯಾತಕೋ ಫಾಲಾಕ್ಷ ನಿನಗೆ
ಲಕ್ಷ್ಮೀರಮಣನಂತ ಸಖನು ನಿನಗಿರಲಿಕ್ಕೆ॥ಪ॥
ರಜತಾದ್ರಿ ಅರಮನೆ ಹೇಮಗಿರಿಯೆ ಧನುವು
ಗಜವಾಹನ ಸುರನಿಕರ ಪರಿವಾರವೂ
ಭುಜಗಭೂಷಣ ನಿನಗಾ ನಿಜಪತ್ನಿ ಅನ್ನಪೂರ್ಣೆ
ಗಜಮುಖನು ಕುಮಾರ ಗಂಡುಮಕ್ಕಳು ಇರಲು॥೧॥
ಬ್ಯಾಡ ಅದು ಬಿಟ್ಟು ನಿನ್ನೆತ್ತು ಯಮಗೆ ಕೊಟ್ಟು
ಮಾಡಬಾರದೆ ಮುಯ್ಯಾ ಅವನ ಕೋಣಾ
ಜೋಡು ಮಾಡಿಕೊಂಡು ಬಾತಿ ಮುಟ್ಟು ತ್ರಿಶೂಲ
ಬೇಡಿದ್ದು ಕೊಡುವದು ಬರಿಯ ಧಾವತಿಗೊಂಡೆ॥೨॥
ರೊಕ್ಕ ರೂಪಗಳಿಲ್ಲವೆಂಬಿಯಾ ಸಾಲವನು
ತಕ್ಕೊಬಾರದ ಗೆಳೆಯ ಧನಪನಲ್ಲಿ
ಶುಕ್ರ ವಕ್ಕಂಣ ಇಕ್ಕಂಣ್ಣ ಮೋಹನವಿಠಲ
ಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಬಿಡದು॥೩॥
***
ಲಕ್ಷುಮೀಪತಿಯಂಥ ಸಖನಿದ್ದ ಬಳಿಕ ||ಅ.ಪ||
ರಜತಾದ್ರಿ ಅರಮನೆಯು ಹೇಮಗಿರಿಯೇ ಧನವು
ಗಜಗಮನ ಸುರನಿಕರ ಪರಿವಾರವು
ಭುಜಗೇಂದ್ರ ಭೂಷಣ ನಿಜರಾಣಿ ಅನ್ನಪೂರ್ಣೇ
ಗಜಮುಖನು ಕುಮಾರ ಗಂಡುಮಕ್ಕಳು ಇರಲು ||೧||
ಬೇಡುವುದ ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟು
ಮಾಡಬಾರದೆ ಮುಯ್ಯ ಅವನ ಕೋಣ
ಜೋಡು ಮಾಡಿಕೊಂಡು ಬಾತಿ ಮುಟ್ಟು ತ್ರಿಶೂಲ
ಬೇಡಿದ್ದು ಆಗದೆ ಬರಿದೆ ಧಾವತಿಗೊಂಬಿ ||೨||
ರೊಕ್ಕ ರೂಪಾಯಿಗಳು ಬೇಕೆಂಬಿಯ ಸಾಲ
ತಕ್ಕೊಬಾರದೆ ಗೆಳೆಯ ಧನಪನಲ್ಲಿ
ಶುಕ್ರ ಒಕ್ಕಣ್ಣ ಮೋಹನವಿಠಲ ಇಕ್ಕಣ್ಣ
ಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಪಿಡಿದಿ ||೩||
Bhikshavyatakko phalaksha ninage ||pa||
Lakshumipatiyantha sakhanidda balika ||a.pa||
Rajatadri aramaneyu hemagiriye dhanavu
gajagamana suranikara parivaravu
bhujagendra bhushana nijarani annapurne
gajamukhanu kumara gandumakkalu iralu ||1||
Beduvuda bittu ninnettu yamanige kottu
madabarade muyya avana kona
jodu madikondu bati muttu trishula
bediddu aagade baride dhavatigombi ||2||
Rokka rupayigalu bekembiya sala
takkobarade geleya dhanapanalli
shukra okkanna mohanavittala ikkanna
mukkanna ninagi munji mantrava pididi ||3||
***
ಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ ಶ್ರೀ
ಲಕುಮಿಪತಿಯೆಂಬ ಸಖನಿದ್ದ ಬಳಿಕ ।।ಪ।।
ರಜತಾದ್ರಿಯರಮನೆಯು ಹೇಮಗಿರಿಯೇಧನವು
ಗಜಗಮನ ಸುರನಿಕರ ಪರಿವಾರವು
ನಿಜರಾಣಿ ಅನ್ನಪೂರ್ಣೆ ಭುಜಗಪತಿ ಭೂಷಣನು
ಗಜಗಮನೆ ಮೊದಲಾದ ಗಂಡು ಮಕ್ಕಳಿರಲು ।।೧।।
ಬೇಡುವುದು ಬಿಟ್ಟು ನಿನ್ನೆತ್ತು ಯಮನಿಗೆ ತೊಟ್ಟು
ಮಾಡಬಾರದೆ ಮುಯ್ಯ ಅವನ ಕೋಣ
ಜೋಡು ಮಾಡಿಕೊಂಡು ಬಾತಿಮುಟ್ಟು ತ್ರಿಶೂಲ
ಬೇಡಿದ್ದು ಆಗದೆ ಬರಿದೆ ಧಾವತಿಗೊಂಬೆ ।।೨।।
ರೊಕ್ಕ ರುಪಾಯಿಗಳ ಇಲ್ಲವೆಂಬೆಯ ಸಾಲ
ತಕ್ಕೊಬಾರದೆ ಗೆಳೆಯ ಧನಪನಲ್ಲಿ
ಶುಕ್ರ ಒಕ್ಕಣ್ಣ ಮೋಹನ ವಿಠಲ ಇಕ್ಕಣ್ಣ
ಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಬಿಡದೆ ।।೩।।
***
ರಾಗ : ಕಾಂಬೋದಿ ತಾಳ : ಝಂಪೆ (raga tala may differ in audio)