Showing posts with label ಹರಿಯನು ಕಾಣಿರೋ ನಿತ್ಯ ಕರ್ಮದಲಿ others. Show all posts
Showing posts with label ಹರಿಯನು ಕಾಣಿರೋ ನಿತ್ಯ ಕರ್ಮದಲಿ others. Show all posts

Saturday, 28 December 2019

ಹರಿಯನು ಕಾಣಿರೋ ನಿತ್ಯ ಕರ್ಮದಲಿ others

ಹರಿಯನು ಕಾಣಿರೋ ನಿತ್ಯ ಕರ್ಮದಲಿ
ಇತರರ ಮನದ ಆನಂದದ ಅಲೆಯಲಿ

ಅನ್ಯರ ಹಸಿವಿಗೆ ಸ್ಪಂದಿಸಿ ಹರಿ ಕಾಣು
ವಿದ್ಯಾ ದಾನವ ಮಾಡುತ ಹರಿ ಕಾಣು
ಕನ್ಯಾದಾನವ ಮಾಡಿ ನಿ ಹರಿ ಕಾಣು
ಬಡವಗೆ ನೆಲೆ ಕೊಟ್ಟು ಅದರಲೇ ಹರಿ ಕಾಣು

ಗುರುಗಳ ಸೇವೆಯ ಮಾಡುತ ಹರಿ ಕಾಣು
ಹಿರಿಯರ ಸಂತಸ ಪಡಿಸುತ ಹರಿ ಕಾಣು
ದೀನರ ಕರೆಗೆ ಮಿಡಿಯುತ ಹರಿ ಕಾಣು
ದಾನ ಧರ್ಮವ ಮಾಡುತ ಹರಿ ಕಾಣು

ದುಷ್ಟ ಜನರ ಸಂಘ ಬಿಟ್ಟು ನಿ ಹರಿ ಕಾಣು
ಸಜ್ಜನರೊಡಗೂಡಿ ಅವರಲಿ ಹರಿ ಕಾಣು
ಮಂದಿಯ ಹರುಷಕೆ ನೆವವಾಗಿ ಹರಿ ಕಾಣು
ತಂದೆ ಹಯನ ಭಕ್ತರಿರುವಲ್ಲಿ ಹರಿ ಕಾಣು
*************