Showing posts with label ಸದಾಶಿವನೆ ರುದ್ರಾ ಕಳೆವುದ ಭದ್ರಾ gurugovinda vittala. Show all posts
Showing posts with label ಸದಾಶಿವನೆ ರುದ್ರಾ ಕಳೆವುದ ಭದ್ರಾ gurugovinda vittala. Show all posts

Monday 18 November 2019

ಸದಾಶಿವನೆ ರುದ್ರಾ ಕಳೆವುದ ಭದ್ರಾ ankita gurugovinda vittala

by ಗುರುಗೋವಿಂದವಿಠಲರು
ಸದಾಶಿವನೆ ರುದ್ರಾ | ಕಳೆವುದ ಭದ್ರಾ |ಸದಾಗತಿಯ ಪದ | ಮಧುಕರ ನೆನಿಸುತಸುಧಾ ರಸವನೆರೆ || ಭಜಿಸುವವರ ಪೊರೆ ಪ

ಗಜಅಜಿನಾಂಬರ |ಭುಜಗಭೂಷವರವಿಜಯಗಿತ್ತೆ ಶರ |ವೃಜಿನವೃಂದ ಹರಬಿಜಯಿಸಿ ಮನದಿ | ರಜವ ಕಳೆಯೊ ತ್ವರ ಅ.ಪ.

ಕೃತ್ತಿವಾಸನೆ | ಭಕ್ತರಾರ್ತಿಹ |ಚಿತ್ತದಲಿನೆಲೆ| ಸುತ್ತ ಪಾಲಿಸೋ ||ಎತ್ತೆ ಈಭವ| ತಪ್ತನಾಗಿಹ |ಗುತ್ತಮೋತ್ತಮ |ವಿತ್ತಕೊಡು ಹರ 1

ರೂಪವೈಕೃತ |ರೂಪತೈಜಸ|ರೂಪತಾಮಸ| ಈ ಪರಿಯಕೊಂಡ||ಶ್ರೀಪ ಪದಕ | ಲಾಪದಲ್ಲಿಡು |ವೈಪರೀತ್ಯ ಪ್ರ | ಲಾಪಕಳೆಶಿವ 2

ಹೇ ಪವನಜನೆ | ತಾಪಸ ಪ್ರಿಯ |ತಾಪಕಳೆ ಗೌ | ರೀಪನೇಭವಕೂಪಕಳೆವ ದ | ಯಾ ಪಯೋ ನಿಧಿ |ಗೋಪಗುರುಗೋವಿಂದ ವಿಠಲಾಪ್ತ 3
*******